ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಬಯಲು ಸೀಮೆ ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೈನುಗಾರಿಕೆ ಇತ್ತೀಚೆಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಹೈನೋದ್ಯಮದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸೀಮೆ ಹಸುಗಳ ಬೆಲೆ ಕುಸಿದಿದ್ದು, ಸರ್ಕಾರ ಹೈನೋದ್ಯಮದ ನೆರವಿಗೆ ಧಾವಿಸದಿದ್ದರೆ ಹೈನೋದ್ಯಮ ಇನ್ನಷ್ಟು ಕುಸಿಯತೊಡಗುತ್ತದೆ ಎಂಬ ಆತಂಕ ರೈತರದ್ದಾಗಿದೆ.
ಗ್ರಾಮೀಣ ಭಾಗದಲ್ಲಿ ರೈತರಿಗೆ ವ್ಯವಸಾಯದಲ್ಲಿ ನಿರೀಕ್ಷಿತ ಆದಾಯ ಬಾರದ ಕಾರಣ ಪ್ರತಿ ಮನೆಯಲ್ಲಿಯೂ ಒಂದೆರಡು ಸೀಮೆ ಹಸುಗಳನ್ನು ಸಾಕಿ ಅದರ ಹಾಲಿನಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇದೀಗ ರೈತರು ಹಗಲಿರುಳು ದುಡಿದು ಹೈನೋದ್ಯಮ ಮಾಡಿ ಡೈರಿಗೆ ಹಾಲು ಸರಬರಾಜು ಮಾಡಿದರೆ ರೈತನಿಗೆ ಕನಿಷ್ಟ ಹಾಲು ಉತ್ಪಾದನೆಗೆ ತಗಲುವ ವೆಚ್ಚವೂ ಸಿಗದೆ ಹೈನುಗಾರಿಕೆಯ ಮೇಲೆ ಆಸಕ್ತಿಯೇ ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ರೈತರು ಬಂದಿದ್ದಾರೆ.
ಪಶು ಆಹಾರದ ಬೆಲೆ ಗಗನಕ್ಕೆ :
ಗುಣಮಟ್ಟದ ಹಾಲು ಪಡೆಯಬೇಕಾದರೆ ಹಸುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಿಂಡಿ ಮತ್ತು ಬೂಸಾ ಕೊಡಬೇಕಾಗುತ್ತದೆ. ರೈತರು ಹಿಂಡಿ ಬೂಸಾ ಖಾಸಗಿಯವರಿಂದ ಖರೀದಿ ಮಾಡಬೇಕಾಗುತ್ತದೆ. ಖಾಸಗಿ ಕಂಪನಿಗಳು ಮನಬಂದAತೆ ಪ್ರತಿ ತಿಂಗಳಿಗೊಮ್ಮೆ ೫೦ ಕೆ.ಜಿ ಮೂಟೆಗೆ ೫೦ ರಿಂದ ೬೦ ರೂ.ಗಳು ಹೆಚ್ಚಳ ಮಾಡುತ್ತಿದ್ದಾರೆ. ರೈತನಿಗೆ ಹಾಲಿನ ದರ ಕಡಿಮೆಯಾದರೂ ಪಶು ಆಹಾರದ ಬೆಲೆ ಹೆಚ್ಚಾದರೂ ರೈತರಿಗೆ ನಷ್ಟ ಎನಿಸಿದರು ದುಬಾರಿ ಬೆಲೆ ನೀಡಿ ಪಶು ಆಹಾರ ಪದಾರ್ಥಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಲಿನ ಪ್ರೋತ್ಸಾಹ ದರ ನೀಡುತ್ತಿಲ್ಲ :
ರೈತ ನಷ್ಟದಲ್ಲಿ ಹಾಲು ಉತ್ಪಾದನೆ ಮಾಡುತ್ತಿದ್ದು, ಹೈನೋದ್ಯಮಕ್ಕೆ ಪ್ರೋತ್ಸಾಹಿಸಲು ಸರ್ಕಾರಗಳು ರೈತರಿಗೆ ಪ್ರತಿ ಲೀ.ಹಾಲಿಗೆ ೫ ರೂ.ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಕಳೆದ ೧೦ ತಿಂಗಳುಗಳಿAದ ರೈತರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವೂ ನೀಡುತ್ತಿಲ್ಲ. ಇದರಿಂದ ಹೈನೋದ್ಯಮ ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾರುಕಟ್ಟೆಯಲ್ಲಿ ಸೀಮೆ ಹಸುಗಳ ಬೆಲೆ ಕುಸಿತ :
ಹೈನೋದ್ಯಮ ನಷ್ಟದಲ್ಲಿರುವ ಕಾರಣ ರೈತರು ಸೀಮೆ ಹಸುಗಳನ್ನು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಮತ್ತು ಈಗಾಗಲೇ ಹೈನೋದ್ಯಮ ಮಾಡುತ್ತಿರುವ ರೈತರು ನಷ್ಟವಾದ ಕಾರಣ ತಮ್ಮ ಬಳಿಯಿರುವ ಸೀಮೆ ಹಸುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದು, ಮಾರುಕಟ್ಟೆಯಲ್ಲಿ ಸೀಮೆ ಹಸುಗಳ ಬೆಲೆ ಕುಸಿತ ಕಂಡಿರುವುದರಿAದ ಮಾರಾಟ ಮಾಡಲು ಹಿಂಜರಿಯುವAತಾಗಿದೆ.
ಒಂದೊತ್ತಿಗೆ ೧೦ ರಿಂದ ೧೨ ಲೀ.ಹಾಲು ಕೊಡುವ ಹಸು ಮಾರುಕಟ್ಟೆಯಲ್ಲಿ ೧ ಲಕ್ಷದಿಂದ ೧.೨೦ ಲಕ್ಷದವರೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಪ್ರತಿ ಹಸುವಿನ ಮೇಲೆ ಮಾರುಕಟ್ಟೆಯಲ್ಲಿ ೭೦ ರಿಂದ ೮೦ ಸಾವಿರದ ತನಕ ಬೆಲೆ ಕುಸಿದಿದೆ.
ಬಾಕ್ಸ್
ಇತ್ತೀಚೆಗೆ ಸೀಮೆ ಹಸುಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿದಿದೆ. ಖರೀದಿದಾರರಿಗಿಂತ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಖರೀದಿ ಮಾಡುವವರು ವಾರದ ಸಂತೆ ಸೇರಿದಂತೆ ಹಳ್ಳಿಗಳ ಮೇಲೆ ಹಸುಗಳನ್ನು ಖರೀದಿ ಮಾಡುವ ವ್ಯಾಪಾರಸ್ಥರು ಬರುತ್ತಿಲ್ಲ. ಕಾರಣ ಹಸು ಖರೀದಿ ಮಾಡುವ ರೈತರ ಸಂಖ್ಯೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥ ಚಂದ್ರೇಗೌಡ ಮಾಹಿತಿ ನೀಡಿದ್ದಾರೆ.
ಕೋಟ್
ಸಮಾಜದಲ್ಲಿ ಪ್ರತಿ ನಿತ್ಯ ಎಲ್ಲರಿಗೂ ಅವಶ್ಯಕತೆಯಿರುವ ಹಾಲು. ಉತ್ಪಾದನೆ ಮಾಡುವ ರೈತ ತೀವ್ರ ನಷ್ಟದಲ್ಲಿ ಉತ್ಪಾದಿಸುತ್ತಿದ್ದಾನೆ. ಪಶುಗಳಿಗೆ ನೀಡುವ ಹಿಂಡಿ ಮತ್ತು ಬೂಸಾ ಖಾಸಗಿಯವರ ಹಿಡಿತದಲ್ಲಿದ್ದು, ಖಾಸಗಿಯವರು ತಮಗೆ ಮನಬಂದAತೆ ದರ ಹೆಚ್ಚಳ ಮಾಡುತ್ತಿದ್ದಾರೆ. ಅದಕ್ಕಾಗಿ ಹಾಲು ಒಕ್ಕೂಟ ಸ್ವಂತ ಕಂಪನಿಯನ್ನು ಸ್ಥಾಪಿಸಿ ಫೀಡ್ ಸರಬರಾಜು ಮಾಡುತ್ತಿರುವ ರೀತಿಯಲ್ಲಿಯೇ ಹಿಂಡಿ ಮತ್ತು ಬೂಸಾ ತಯಾರಿಕಾ ಕಂಪನಿಗಳನ್ನು ಸ್ಥಾಪಿಸಿ ಒಕ್ಕೂಟದಿಂದಲೇ ರೈತರಿಗೆ ಗುಣಮಟ್ಟದ ಬೂಸಾ ತಯಾರಿಸಿ ರೈತರ ಕೈಗೆಟುಕುವ ದರದಲ್ಲಿಯೇ ನೇರವಾಗಿ ಡೈರಿಗಳ ಮೂಲಕ ರೈತರಿಗೆ ನೀಡುವಂತಹ ಕೆಲಸ ಸರ್ಕಾರಗಳು ಮಾಡಿದರೆ ಹೈನೋದ್ಯಮಿಗಳಿಗೆ ಅನುಕೂಲವಾಗುತ್ತದೆ ಮತ್ತು ಹೈನೋದ್ಯಮ ಉಳಿಯುತ್ತದೆ.
-ಮಂಜುನಾಥರೆಡ್ಡಿ, ರೈತ, ಗೌನಿಪಲ್ಲಿ.
ಕೋಟ್
ಪ್ರತಿ ನಿತ್ಯ ಮುಂಜಾನೆ ೫ ಗಂಟೆಯಿAದ ಸಂಜೆ ೭ ಗಂಟೆಯವರೆವಿಗೂ ಹಸುಗಳ ಆರೈಕೆ ಮಾಡಿ, ಹಾಲು ಕರೆದು ಡೈರಿಗೆ ಹಾಕಿದರೆ ನಮಗೆ ತಗಲುವ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಹಾಲನ್ನು ಕೊಂಡುಕೊಳ್ಳುತ್ತಿದ್ದಾರೆ. ಹಾಲಿನ ಡೈರಿಯವರು ಲೀ.ಗೆ ೩೧ ರೂ.ಗಳನ್ನು ನೀಡುತ್ತಿದ್ದಾರೆ. ಸರ್ಕಾರ ಪ್ರೋತ್ಸಾಹ ಧನವಾಗಿ ೫ ರೂ.ಗಳನ್ನು ನೀಡುತ್ತಿದ್ದಾರೆ. ಸರ್ಕಾರ ನೀಡುವ ಪ್ರೋತ್ಸಾಹಧನ ೧೦ ತಿಂಗಳಿನಿAದ ಕೈ ಸೇರಿಲ್ಲ. ಅದಕ್ಕಾಗಿ ಹೈನುಗಾರಿಕೆಯನ್ನೇ ಬಿಟ್ಟು ಬಿಡುವ ಮನಸ್ಸು ಮಾಡಿದ್ದೇವೆ.
-ಗಿರಿಜಮ್ಮ, ಹೈನೋದ್ಯಮಿ.
ಚಿತ್ರ ೦೧ ಕೆ.ಎಲ್.ಆರ್. ೦೧ : ಹಸುಗಳನ್ನು ಮಾರಾಟಕ್ಕೆ ಸಂತೆಗಳಿಗೆ ಹೋದರು ಮಾರಾಟವಾಗುತ್ತಿಲ್ಲ.
ಚಿತ್ರ ೦೧ ಕೆ.ಎಲ್.ಆರ್. ೦೧ಎ : ಡೈರಿಗೆ ಹಾಲು ಹಾಕುತ್ತಿರುವ ಹಾಲಿನ ಚಿತ್ರ
ಚಿತ್ರ ೦೧ ಕೆ.ಎಲ್.ಆರ್. ೦೧ಬಿ : ಮಂಜುನಾಥರೆಡ್ಡಿ, ರೈತ, ಗೌನಿಪಲ್ಲಿ ರವರ ಭಾವಚಿತ್ರ
ಚಿತ್ರ ೦೧ ಕೆ.ಎಲ್.ಆರ್. ೦೧ಸಿ : ಗಿರಿಜಮ್ಮ, ಹೈನೋದ್ಯಮಿ. ರವರ ಭಾವಚಿತ್ರ