ನ್ಯೂಸ್

ಷಟಲ್ ಬ್ಯಾಡ್ಮಿಂಟನ್ ತರಬೇತಿ

ಚಿತ್ರದುರ್ಗ: ಖೇಲೋ ಇಂಡಿಯಾ ಯೋಜನೆಯಡಿ ಜಿಲ್ಲೆಯ ಆಸಕ್ತ ಕ್ರೀಡಾಪಟುಗಳಿಗೆ ಷಟಲ್ ಬ್ಯಾಡ್ಮಿಂಟನ್ ತರಬೇತಿ ನೀಡಲಾಗುವುದು. ಆಸಕ್ತ 6ರಿಂದ 14 ವರ್ಷದೊಳಗಿನ ಬಾಲಕ, ಬಾಲಕಿಯರು ಜಿ.ಕೆ. ಗುರುಮೂರ್ತಿ, ಖೇಲೋ ಇಂಡಿಯಾ ತರಬೇತುದಾರ, ಒಳಾಂಗಣ ಕ್ರೀಡಾಂಗಣ, ಚಿತ್ರದುರ್ಗ ಇವರಲ್ಲಿ ಮೇ 30ರೊಳಗೆ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.