ವಿಜಯವಾಣಿ ಸುದ್ದಿಜಾಲ ಕೋಲಾರ
ಶ್ರೀರಾಮನವಮಿ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀರಾಮಸೇನೆ ಸಂಘಟನೆ ನಗರದ ಗಾಂಧಿವನದಲ್ಲಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪಿಸಿದ್ದು, ಮೂರು ದಿನಗಳ ಕಾಲ ನಡೆದ ರಾಮೋತ್ಸವದ ನಂತರ ಬುಧವಾರ ನಡೆದ ಶೋಭಾಯಾತ್ರೆಗೆ ಮಾಜಿ ಸಚಿವವರ್ತೂರು ಪ್ರಕಾಶ್, ಎಂಎಲ್‌ಸಿ ಗೋವಿಂದರಾಜು, ಮುಖಂಡರಾದ ಸಿಎಂಆರ್ ಶ್ರೀನಾಥ್, ಲೋಕಸಭಾ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಚಾಲನೆ ನೀಡಿದರು.
ಕಳೆದ ಮೂರು ದಿನಗಳಿಂದ ಗಾಂಧಿವನದಲ್ಲಿ ಅತ್ಯಂತ ಅದ್ಬುತವಾದ ವೇದಿಕೆ ನಿರ್ಮಿಸಿ ರಾಮಲಲ್ಲಾ ಪ್ರತಿಮೆ ಪ್ರತಿಷ್ಟಾಪಿಸಿ ಪೂಜೆ ನಡೆಸಲಾಯಿತು. ಇಡೀ ಎಂ.ಜಿ.ರಸ್ತೆಯಲ್ಲಿ ಕೇಸರಿ ಧ್ವಜಗಳು ರರಾಜಿಸುವಂತೆ ಮಾಡಲಾಗಿತ್ತು.
ಮಾಜಿ ಸಚಿವ ವರ್ತೂರು ಪ್ರಕಾಶ್ ಸಾಂಕೇತಿಕವಾಗಿ ಶೋಭಾಯಾತ್ರೆಗೆ ಬುಧವಾರ ಚಾಲನೆ ನೀಡಿ, ಶ್ರೀರಾಮನ ಆಶೀರ್ವಾದದಿಂದ ಜಿಲ್ಲೆಯಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ, ಜನತೆ ಆರೋಗ್ಯದಿಂದಿರಲಿ ಎಂದು ಹಾರೈಸಿದರು.
ಮೆರವಣಿಗೆ ನಗರದ ಎಂ.ಜಿ.ರಸ್ತೆ, ಎಲೆಪೇಟೆ, ಕಾಳಮ್ಮ ಗುಡಿ ರಸ್ತೆ ಮೂಲಕ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದ್ದು, ಮಾರ್ಗದುದ್ದಕ್ಕೂ ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಯುವಕರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಇಡೀ ಎಂ.ಜಿ.ರಸ್ತೆ ಕೇಸರಿಮಯವಾಗಿತ್ತು.
ರಾಮೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದಲೇ ಶ್ರೀರಾಮಸೇನೆ ಸಿದ್ದತೆ ನಡೆಸಿದ್ದು, ಇಡೀ ಎಂ.ಜಿ.ರಸ್ತೆ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಿದ್ದರು. ಮೂರು ದಿನಗಳೂ ಸಾಂಸ್ಕೃತಿಕ ಕಾರ್ಯಾಕ್ರಮಗಳನ್ನು ನಡೆಸಲಾಯಿತು.
ತಮಟೆನಾದ, ಡೊಳ್ಳು ಮತ್ತಿತರ ಕಲಾತಂಡಗಳ ತಾಳಕ್ಕೆ ಯುವಕರು ಕುಣಿಯುತ್ತಾ, ಜೈಶ್ರೀರಾಂ ಘೋಷಣೆಯೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಶ್ರೀರಾಮಸೇನೆ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ರಮೇಶ್ ರಾಜ್, ಪದಾಧಿಕಾರಿಗಳಾದ ಸುಪ್ರೀತ್,ಅರುಣ್, ಸುಮನ್,ನವೀನ್, ಸಚಿನ್ ಚಿನ್ನಪ್ಪ, ಶಬರೀಷ್, ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ಮುಖಂಡ ಬಾಲಾಜಿ, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಸಿ.ಡಿ.ರಾಮಚಂದ್ರ, ಕೆಂಬೋಡಿ ನಾರಾಯಣಸ್ವಾಮಿ, ಅಡಿಕೆ ನಾಗರಾಜ್, ಜೀವನ್‌ರಾಜ್, ಚಲಪತಿ, ಅರುಣಮ್ಮ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ೧೭ ಕೆ.ಎಲ್.ಆರ್. ೦೭ : ಕೋಲಾರದ ಗಾಂಧಿವನದಲ್ಲಿ ಶ್ರೀರಾಮಸೇನೆಯಿಂದ ಆಯೋಜಿಸಿರುವ ರಾಮನವಮಿ ಹಾಗೂ ಬೃಹತ್ ಶೋಭಾಯಾತ್ರೆಗೆ ಮಾಜಿ ಸಚಿವ ವರ್ತೂರು ಪ್ರಕಾಶ್, ಸಿಎಂಆರ್.ಶ್ರೀನಾಥ್ ಚಾಲನೆ ನೀಡಿದರು.
ಚಿತ್ರ ೧೭ ಕೆ.ಎಲ್.ಆರ್. ೦೭ಎ : ಕೋಲಾರದ ಗಾಂಧಿವನದಲ್ಲಿ ಶ್ರೀರಾಮಸೇನೆಯಿಂದ ಆಯೋಜಿಸಿರುವ ರಾಮನವಮಿ ಹಾಗೂ ಬೃಹತ್ ಶೋಭಾಯಾತ್ರೆ ನಗರದಲ್ಲಿ ಸಾಗಿ ಬಂತು.