ನ್ಯೂಸ್

ಶ್ರೀನಿವಾಸಪುರದಲ್ಲಿ ರೈತರ ಮತ್ತು ಅರಣ್ಯ ಇಲಾಖೆ ಮಧ್ಯೆ ಸಂಘರ್ಷ / ಟ್ರಾö್ಯಕ್ಟರ್‌ಗಳನ್ನು ವಶಪಡಿಸಿಕೊಳ್ಳಲು ಬಂದ ಅರಣ್ಯ ಇಲಾಖೆಯ ವಿರುದ್ಧ ತಿರುಗಿ ಬಿದ್ದ ಒತ್ತುವರಿದಾರರು / ಧರಣಿ ನಡೆಸಿದ ಗ್ರಾಮಸ್ಥರು

ವಿಜಯವಾಣಿ ಸುದ್ದಿಜಾಲ ಕೋಲಾರ / ಶ್ರೀನಿವಾಸಪುರ

ಜಿಲ್ಲೆಯಲ್ಲಿ ಅರಣ್ಯ ಒತ್ತುವರಿದಾರರ ಮತ್ತು ಅರಣ್ಯ ಇಲಾಖೆ ಮಧ್ಯೆ ಸಂಘರ್ಷ ನಡೆಯುತ್ತಿದೆ. ಶನಿವಾರ ಶ್ರೀನಿವಾಸಪುರ ತಾಲ್ಲೂಕು ಕೇತಗಾನಹಳ್ಳಿ ಗ್ರಾಮದ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆದು ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಇಲಾಖೆಯವರು ಕಳೆದ ೬ ತಿಂಗಳಿನಿAದ ಸಾವಿರಾರು ಎಕೆರೆ ಅರಣ್ಯ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡಿದ್ದಾರೆ. ಆದರೆ ರೈತರು ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆಯನ್ನು ತಂದು ತೆರವು ಮಾಡಿರುವ ಒತ್ತುವರಿ ಜಮೀನು ಪ್ರವೇಶ ಮಾಡಲು ಮುಂದಾಗಿದ್ದಾರೆ. ಇದರಿಂದ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆಯುವಂತಾಗಿದೆ.

ಏಪ್ರಿಲ್ ೫ ರಂದು ಶ್ರೀನಿವಾಸಪುರ ತಾಲ್ಲೂಕು ಕೇತಗಾನಹಳ್ಳಿ ಸಮೀಪ ರೈತರಿಂದ ವಶಪಡಿಸಿಕೊಂಡಿದ್ದ ಭೂಮಿಯ ಸ್ವಾಧೀನಕ್ಕೆ ರೈತರು ಪ್ರವೇಶ ಮಾಡಿ ರೈತರ ಮತ್ತು ಇಲಾಖೆ ಮಧ್ಯೆ ಸಂಘರ್ಷ ನಡೆಯಿತು. ಪೋಲಿಸರು ಮಧ್ಯೆ ಪ್ರವೇಶ ಮಾಡಿ ಕೋರ್ಟ್ ತಡೆಯಾಜ್ಞೆ ಇರುವ ಕಾರಣ ಅರಣ್ಯ ಇಲಾಖೆಯವರು ಮತ್ತು ರೈತರು ಪ್ರವೇಶ ಮಾಡಬಾರದು ಎಂದು ಉಳುಮೆ ಮಾಡಲು ಬಂದಿದ್ದ ರೈತರನ್ನು ವಾಪಸ್ಸು ಕಳುಹಿಸಿದ್ದರು.

ಅಕ್ರಮವಾಗಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದ ಜಮೀನಿಗೆ ರೈತರು ಪ್ರವೇಶ ಮಾಡಿದ್ದಾರೆ ಎಂದು ಉಳುಮೆ ಮಾಡಲು ಬಂದಿದ್ದ ೫ ಟ್ರಾಕ್ಟರ್‌ಗಳು ಮತ್ತು ರೈತರ ಮೇಲೆ ಕೇಸು ದಾಖಲಿಸಿದ್ದರು.

ಕಳೆದ ೨ ದಿನಗಳಿಂದ ಮುಂಗಾರು ಮಳೆ ಬೀಳುತ್ತಿರುವ ಕಾರಣ ರೈತರು ಒತ್ತುವರಿ ತೆರವು ಮಾಡಿರುವ ಪ್ರದೇಶಕ್ಕೆ ಉಳುಮೆ ಮಾಡಲು ನುಗ್ಗುತ್ತಾರೆ ಎಂದು ಭಾನುವಾರ ಅರಣ್ಯ ಇಲಾಖೆ ಡಿಎಫ್‌ಓ ಸರೀನಾ ಸಿಕ್ಕಲಿಗರ್ ನೇತೃತ್ವದಲ್ಲಿ ೨೦೦ ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಪೋಲಿಸರು ಕೇತಗಾನಹಳ್ಳಿ ಸಮೀಪದಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಜಾಗಕ್ಕೆ ಭೇಟಿ ನೀಡಿದ್ದರು. ಉಳುಮೆ ಮಾಡಲು ಬಂದಿದ್ದ ಟ್ರಾಕ್ಟರ್‌ಗಳನ್ನು ವಶಪಡಿಸಿಕೊಳ್ಳಲು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒತ್ತುವರಿದಾರರ ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಘರ್ಷಣೆ ನಡೆಯಿತು.

ಏ.೫ ರಂದು ಕೇಸು ದಾಖಲಾಗಿದ್ದ ೫ ಟ್ರಾಕ್ಟರ್‌ಗಳಲ್ಲಿ ೩ ಟ್ರಾಕ್ಟರ್‌ಗಳನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಲ್ಲಿ ಮತ್ತಷ್ಟು ಸಂಘರ್ಷಗಳು ನಡೆಯಿತು. ಗ್ರಾಮಸ್ಥರು ಮತ್ತು ಪೋಲಿಸರ ಹಾಗೂ ಅರಣ್ಯ ಇಲಾಖೆಯವರ ಮಧ್ಯೆ ಮಾತಿನ ಚಕಮಕಿಯು ನಡೆಯಿತು. ಆ ಸಂದರ್ಭದಲ್ಲಿ ಅಡ್ಡಿಪಡಿಸಿದರೆಂದು ಗ್ರಾಮದ ಗೋಪಾಲಕೃಷ್ಣ ಮತ್ತು ಬೈರೆಡ್ಡಿಯವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಜಿ.ಕೆ.ಮಂಜು ರವರ ನೇತೃತ್ವದಲ್ಲಿ ಕೇತಗಾನಹಳ್ಳಿ ಬಳಿಯ ಮುಳಬಾಗಿಲು ಶ್ರೀನಿವಾಸಪುರ ರಸ್ತೆಯಲ್ಲಿ ಧರಣಿ ನಡೆಸಿದರು. ನಂತರ ಪೋಲಿಸರು ಮಧ್ಯೆ ಪ್ರವೇಶಿಸಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆಂದು ಧರಣಿಯನ್ನು ತೆರವುಗೊಳಿಸಿದರು.

ಬಾಕ್ಸ್

ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಜಿಲ್ಲಾಡಳಿತ ಮತ್ತು ರಾಜಕಾರಣಿಗಳು ಗಮನ ಹರಿಸದೇ ಇರುವುದರಿಂದ ಸಾರ್ವಜನಿಕರಲ್ಲಿ ಇಲಾಖೆಯ ಮೇಲೆ ಕೆಟ್ಟ ಅಭಿಪ್ರಾಯ ಬರುವಂತಾಗಿದೆ. ಇಲಾಖೆಯವರು ಒತ್ತುವರಿದಾರರು ರೈತರನ್ನು ರಿಯಲ್ ಎಸ್ಟೇಟ್ ಧಂಗೆ ನಡೆಸುವವರೆಂದು ಹೇಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ರೈತರ ಅಥವಾ ರಿಯಲ್ ಎಸ್ಟೇಟ್ ದಾರರೇ ಎಂಬ ಕೆಟ್ಟ ಅಭಿಪ್ರಾಯದಿಂದ ರೈತರನ್ನು ನೋಡುವಂತಾಗಿದೆ. ಸರ್ಕಾರವು ಮಧ್ಯೆ ಪ್ರವೇಶ ಮಾಡಬೇಕಾಗಿದೆ.

ಕೋಟ್

ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ವಶಪಡಿಸಿಕೊಂಡಿರುವ ಜಮೀನಿಗೆ ರೈತರು ಅಕ್ರಮ ಪ್ರವೇಶ ಮಾಡಬಾರದು ಎಂದು ಶನಿವಾರ ನಮ್ಮ ಇಲಾಖೆ ಮತ್ತು ಪೋಲಿಸ್ ಫೋರ್ಸ್ನೊಂದಿಗೆ ಸುಮಾರು ೫ ಜಾಗಳಿಗೆ ಭೇಟಿ ನೀಡಿದ್ದೆವು. ಕೇತಗಾನಹಳ್ಳಿ ಸಮೀಪ ಕೆ.ಎಂ.ನಾಗರಾಜ್ ಎಂಬುವವರಿಗೆ ೭ ಎಕೆರೆ ಜಮೀನಿಗೆ ಮಾತ್ರ ತಡೆಯಾಜ್ಞೆ ತಂದಿದ್ದಾರೆ. ಅದು ನಾವು ತೆರವುಗೊಳಿಸದ ನಂತರ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದಲ್ಲಿ ತೀರ್ಮಾನ ಆಗುವ ತನಕ ನಾವು ಪ್ರವೇಶ ಮಾಡುವಂತಿಲ್ಲ. ಅವರು ಪ್ರವೇಶ ಮಾಡಬಾರದು. ಉಳಿದ ಜಮೀನಿಗೂ ಪ್ರವೇಶ ಮಾಡಿ ನಾವು ನಾಟಿ ಮಾಡಿದ್ದ ಗಿಡಗಳನ್ನು ನಾಶ ಮಾಡಿದ್ದಾರೆ. ಹಾಗೂ ಕಾಂಪೌAಡ್‌ನ್ನು ನಾಶ ಮಾಡಿದ್ದಾರೆ. ಒತ್ತುವರಿದಾರರೆಲ್ಲರೂ ರೈತರೇ, ಅವು ರಿಯಲ್ ಎಸ್ಟೇಟ್ ಮಾಡುವವರಾಗಿದ್ದಾರೆ. ೧೯೩೦ರಲ್ಲಿಯೂ ಅರಣ್ಯ ಇಲಾಖೆಗೆ ಒಳಪಟ್ಟಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ೨ ರಿಂದ ೩ ದಿನಗಳಲ್ಲಿ ತಡೆಯಾಜ್ಞೆ ತೆರವುಗೊಳ್ಳಲಿದೆ ಆದ್ದರಿಂದ ಒತ್ತುವರಿದಾರರು ಪ್ರವೇಶ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ.

-ಸರೀನಾ ಸಿಕ್ಕಲಿಗರ್, ಡಿಎಫ್‌ಓ, ಕೋಲಾರ.

ಕೋಟ್

೩೦ ರಿಂದ ೪೦ ವರ್ಷಗಳ ಕಾಲ ರೈತರು ಸ್ವಾಧೀನ ಇರುವ ಭೂಮಿಯನ್ನು ಅರಣ್ಯ ಇಲಾಖೆಯವರು ನಮ್ಮದು ಎಂದು ಏಕಾಏಕಿ ಬೆಳೆಗಳನ್ನು ನಾಶಪಡಿಸಿ ಸ್ವಾಧೀನಪಡಿಸಿಕೊಂಡಿದ್ದಾರೆ. ಈಗಾಗಲೇ ರೈತರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆಯನ್ನು ತಂದಿದ್ದಾರೆ. ಆದರೂ ಸಹ ಅರಣ್ಯ ಇಲಾಖೆಯವರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಕೇತಗಾನಹಳ್ಳಿ ಗ್ರಾಮಕ್ಕೆ ಶನಿವಾರ ಅರಣ್ಯ ಇಲಾಖೆಯವರು ನುಗ್ಗಿ ಅಡ್ಡಬಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರೈತರ ಮೇಲೆ ದಬ್ಬಾಳಿಕೆಯನ್ನು ನಡೆಸಿದ್ದಾರೆ. ರೈತರ ಬಳಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳು ಇದ್ದರೂ ದಬ್ಬಾಳಿಕೆ ಮುಂದುವರೆಸಿದ್ದಾರೆ. ಹೀಗೆ ಮುಂದುವರೆದರೆ ಇಲಾಖೆಯ ವಿರುದ್ಧ ರೈತರು ಧಂಗೆ ಏಳಬೇಕಾಗುತ್ತದೆ ಎಂದು ಹೆಚ್ಚರಿಕೆ ನೀಡಿದರು.

-ಕೆ.ಕೆ.ಮಂಜು, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ.

ಚಿತ್ರ ೧೩ ಕೆ.ಎಲ್.ಆರ್. ೦೨ : ರಸ್ತೆಯಲ್ಲಿ ಧರಣಿ ನಡೆಸುತ್ತಿರುವ ರೈತರು

ಚಿತ್ರ ೧೩ ಕೆ.ಎಲ್.ಆರ್. ೦೨ಎ : ಟ್ರಾö್ಯಕ್ಟರ್‌ಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ರೈತರು ಅಡ್ಡಿಪಡಿಸುತ್ತಿರುವುದು.

ಚಿತ್ರ ೧೩ ಕೆ.ಎಲ್.ಆರ್. ೦೨ಬಿ : ಸರೀನಾ ಸಿಕ್ಕಲಿಗರ್, ಡಿಎಫ್‌ಓ, ಕೋಲಾರ ರವರ ಭಾವಚಿತ್ರ

ಚಿತ್ರ ೧೩ ಕೆ.ಎಲ್.ಆರ್. ೦೨ಸಿ : ಕೆ.ಕೆ.ಮಂಜು, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ. ರವರ ಭಾವಚಿತ್ರ