ನ್ಯೂಸ್

ಶ್ರೀನಿವಾಸಪುರದಲ್ಲಿ ಆರ್.ಎಸ್.ಎಸ್. ಪಥಸಂಚಲನ ವೇಳೆ ಅಲ್ಲಾಹೋ ಅಕ್ಬರ್ ಘೋಷಣೆ / ಪೋಲಿಸರ ಸಮಯಪ್ರಜ್ಞೆಯಿಂದ ಅನಾಹುತಗಳಿಗೆ ಅವಕಾಶವಿಲ್ಲದೇ ಸುಗಮವಾಗಿ ನಡೆದ ಪಥಸಂಚಲನ

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ

ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಆರ್.ಎಸ್.ಎಸ್. ಶತಮಾನೋತ್ಸವ ಅಂಗವಾಗಿ ನಡೆದ ಪಥಸಂಚಲನ ವೇಳೆಯಲ್ಲಿ ಮಸೀದಿ ರಸ್ತೆಯಲ್ಲಿ ಪಥಸಂಚಲನ ಸಾಗಿದ ಸಂದರ್ಭದಲ್ಲಿ ಅನ್ಯ ಗುಂಪಿನವರು ಅಲ್ಲಾಹೋ ಅಕ್ಬರ್ ಎಂಬ ಘೋಷಣೆಗಳು ಕೂಗಿ ಬಂದ ಹಿನ್ನಲೆಯಲ್ಲಿ ಉಂಟಾಗುತ್ತಿದ್ದ ಉದ್ರಿಕ್ತ ವಾತಾವರಣವನ್ನು ಪೋಲಿಸರ ಸಮಯಪ್ರಜ್ಞೆಯಿಂದ ಯುವಕರ ಗುಂಪನ್ನು ಚದುರಿಸಿ ಪಥಸಂಚಲನ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟರು.

ಆರ್.ಎಸ್.ಎಸ್. ಸ್ವಯಂಸೇವಕರು ಗಣವೇಶಧಾರಿ ತೊಟ್ಟು ಬಾಲಕಿಯರ ಕಾಲೇಜು ಆವರಣದಿಂದ ಪಟ್ಟಣದ ರಥಬೀದಿಗಳಲ್ಲಿ ಪಥಸಂಚಲನ ನಡೆಸಿ ಮುಳಬಾಗಿಲು ವೃತ್ತ, ಕೋಲಾರ ವೃತ್ತದ ಮೂಲಕ ಚಿಂತಾಮಣಿ ವೃತ್ತಕ್ಕೆ ಬಂದು ಅಲ್ಲಿಂದ ಮಟನ್ ಮಾರ್ಕೆಟ್ ರಸ್ತೆಯ ಮೂಲಕ ಮಸೀದಿಗಳ ಮುಂಭಾಗ ಪಥಸಂಚಲನ ಸಾಗಿ ಬಂದಲ್ಲಿ ಯುವಕರ ಒಂದು ಗುಂಪು ಅಲ್ಲಾಹೋ ಅಕ್ಬರ್ ಎಂಬ ಘೋಷಣೆಗಳನ್ನು ಕೂಗಿ ಅಲ್ಲಿಂದ ಪರಾರಿಯಾದರು.

ಪೋಲಿಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್ ಇದ್ದ ಕಾರಣ ಪಥಸಂಚಲನ ಸುಗಮವಾಗಿ ಸಾಗಿತ್ತು. ನೂರಾರು ಗಣವೇಶಧಾರಿಗಳು ಪಥಸಂಸನದಲ್ಲಿ ಭಾಗಿಯಾಗಿದ್ದರು. ರಸ್ತೆಗಳ ಇಕ್ಕಲೆಗಳಲ್ಲಿ ಸಾರ್ವಜನಿಕರು ನಿಂತು ಗಣವೇಶಧಾರಿಗಳ ಮೇಲೆ ಹೂವಿನ ಸುರಿಮಳೆಯನ್ನು ಸುರಿಸಿದರು.

ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಹೆಡಗೆವಾರ್ ಮತ್ತು ಭಾರತ ಮಾತೆಯ ಭಾವಚಿತ್ರವನ್ನು ಹೊತ್ತ ಮೆರವಣಿಗೆಯನ್ನು ಬ್ಯಾಂಡ್‌ನೊAದಿಗೆ ಮುಂದೆ ಸಾಗಿದರು. ಕಾರ್ಯಕ್ರಮದಲ್ಲಿ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿüಕಾರಿಗಳು ಮತ್ತು ಕಾರ್ಯಕರ್ತರು ಮತ್ತು ವಿಧಾನಪರಿಷತ್ತು ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್ ಸೇರಿದಂತೆ ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದರು.

ವಾಗ್ವಾದ :

ಮಸೀದಿಗಳ ಸಮೀಪದಿಂದ ಮುಂದೆ ಪಥಸಂಚಲನ ಸಾಗಿದ ನಂತರ ಅನ್ಯ ಕೋಮಿನ ಯುವಕರ ಮತ್ತು ಪೋಲಿಸರ ಮಧ್ಯೆ ವಾಗ್ವಾದ ನಡೆಯಿತು. ನಾವು ಮಸೀದಿಗೆ ಹೋಗುವ ಸಮಯದಲ್ಲಿ ಇದೇ ರಸ್ತೆಯಲ್ಲಿ ಪಥಸಂಚಲಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಪೋಲಿಸರ ಮತ್ತು ಅನ್ಯ ಕೋಮಿನವರ ವಿರುದ್ಧ ವಾಗ್ವಾದಕ್ಕೆ ಮುಂದಾದಾಗ ಅನ್ಯ ಕೋಮಿನ ಹಿರಿಯರು ಯುವಕರನ್ನು ಸಮಾಧಾನಪಡಿಸಿ ಎಲ್ಲರೂ ಒಟ್ಟಾಗಿ ಹೋಗಬೇಕು. ಯಾವುದೇ ಅವಕಾಶಗಳಿಗೆ ಎಡೆಮಾಡಿಕೊಡಬಾರದು ಎಂದು ಯುವಕರ ಗುಂಪಿಗೆ ಬುದ್ಧಿವಾದ ಹೇಳಿದರು ಎನ್ನಲಾಗಿದೆ.

ಬಾಕ್ಸ್ :

ಮಸೀದಿಗೆ ಅಲ್ಲಾಗೆ ತೆರಳುವುದು ಸಂಜೆ ೫ ಗಂಟೆಗೆ ನಾವು ಆ ರಸ್ತೆಯಲ್ಲಿ ಪಥಸಂಚಲ ನಡೆಸಿದ ಸಂದರ್ಭ ೪.೩೦ ಆದರೆ ವಿನಾಕಾರಣ ಘೋಷಣೆ ಕೂಗಿರುವುದು ಇದೇನು ಮುಸ್ಲಿಂ ದೇಶಾನಾ ಇದು ಹಿಂದೂ ರಾಷ್ಟç. ಮುಸ್ಲಿಂ ಬೀದಿಗಳಲ್ಲಿ ಆರ್.ಎಸ್.ಎಸ್. ಪಥಸಂಚಲನ ಹೋಗಬಾರದು ಎಂಬ ಕಾನೂನು ಇದೆಯೇ. ಹಿಂದೂಗಳು ಇನ್ನಾದರು ಎಚ್ಚೆತ್ತುಕೊಳ್ಳಬೇಕು ಎಂದು ಹಿರಿಯ ಆರ್.ಎಸ್.ಎಸ್. ಮುಖಂಡ ಜಿ.ಎಸ್.ಚಂದ್ರಶೇಖರ್ ಆರೋಪಿಸಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೭ : ಆರ್.ಎಸ್.ಎಸ್. ಪಥಸಂಚಲನದಲ್ಲಿ ಭಾಗವಹಿಸಿದ ವಿಧಾನಪರಿಷತ್ತು ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಆರ್.ಎನ್.ಚಂದ್ರಶೇಖರ್ ಮುಂತಾದವರು ಇದ್ದರು.

ಚಿತ್ರ ೧೮ ಕೆ.ಎಲ್.ಆರ್. ೦೭ಎ : ಪೋಲಿಸರ ಮತ್ತು ಅನ್ಯ ಕೋಮಿನವರ ಮಧ್ಯೆ ನಡೆಯುತ್ತಿರುವ ವಾಗ್ವಾದ