ನ್ಯೂಸ್

ಶ್ರೀನಿವಾಸಪುರ ಪಟ್ಟಣದಲ್ಲಿ ಅಕ್ರಮ ಬಾಂಗ್ಲಾ ದೇಶದ ವಲಸಿಗರು ಪೋಲಿಸರ ವಶಕ್ಕೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಬಾಂಗ್ಲಾದೇಶದ ಮೂವರು ಮಕ್ಕಳು ಸೇರಿದಂತೆ ೧೦ ಜನ ಅಕ್ರಮ ವಲಸಿಗರನ್ನು ಶ್ರೀನಿವಾಸಪುರ ಪಟ್ಟಣದಲ್ಲಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸಪುರ ಪಟ್ಟಣದ ರಾಮಕೃಷ್ಣ ಪಾಲಿ ಟೆಕ್ನಿಕಲ್ ಕಾಲೇಜು ಸಮೀಪ ಕೋಳಿ ಫಾರಂನಲ್ಲಿ ಇಬ್ಬರು ಚಿಂದಿ ಆಯುತ್ತಿದ್ದು, ಅವರನ್ನು ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದಿAದ ಅಕ್ರಮವಾಗಿ ವಲಸೆ ಬಂದಿರುವುದು ಪತ್ತೆಯಾಗಿದೆ.

ಅವರಿಂದ ಮಾಹಿತಿ ಆಧರಿಸಿದ ಪೋಲಿಸರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂದಗುಡಿ ಬಳಿಯ ನಾಲ್ವರು ಪುರುಷರು ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ ಒಟ್ಟು ೧೦ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಎಸ್ಪಿ ಬಿ.ನಿಖಿಲ್ ಶ್ರೀನಿವಾಸಪುರ ಪೋಲಿಸ್ ಠಾಣೆಗೆ ಭೇಟಿ ನೀಡಿ ಅಕ್ರಮ ವಲಸಿಗರಿಂದ ಹೆಚ್ಚಿನ ಮಾಹಿತಿ ಕಲೆಹಾಕಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಕೋಳಿ ಫಾರಂಗಳಲ್ಲಿ ಕೆಲಸ ಹುಡುಕಿ ಜಿಲ್ಲೆಗೆ ವಲಸೆ ಬಂದಿರುವುದಾಗಿ ತಿಳಿದುಬಂದಿದೆ.