ನ್ಯೂಸ್

ಶ್ರೀಗಂಧದ ಮರ ಕಳವಿಗೆ ಯುತ್ನ

ಸರಸ್ವತಿಪುರಂ ಹ್ಯಾಪಿ ಮ್ಯಾನ್ ಪಾರ್ಕಿನಲ್ಲಿ ಬುಧವಾರ ರಾತ್ರಿ ಶ್ರೀಗಂಧದ ಮರವನ್ನು ಕತ್ತರಿಸಿದ ಖದೀಮರು ಕಳವಿಗೆ ಯುತ್ನ ನಡೆಸಿದ್ದಾರೆ.

ತಡರಾತ್ರಿ ಪಾರ್ಕಿನ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಗರಗಸದ ಮೂಲಕ ಕತ್ತರಿಸಿದ್ದು, ಬಳಿಕ ಮರದ ಕಾಂಡವನ್ನು ಸಾಗಿಸಲು ಯತ್ನಿಸಿದ್ದು, ಸಾಧ್ಯವಾಗದೇ ಪರಾರಿಯಾಗಿದ್ದಾರೆ.

ಗುರುವಾರ ಬೆಳಗ್ಗೆ ವಾಯು ವಿಹಾರಿಗಳು ಮರ ಕಡಿದು ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸರಸ್ವತಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕತ್ತರಿಸಿದ್ದ ಮರದ ತುಂಡನ್ನು ವಶಕ್ಕೆ ಪಡೆಯಲಾಗಿದೆ.