ಅನುಮತಿ ಇಲ್ಲದೇ ಅಕ್ರಮವಾಗಿ ಶ್ರೀಗಂಧದ ಮತು ರಕ್ತ ಚಂದನದ ತುಂಡು ಮತ್ತು ಪುಡಿಯನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿರುವ ಅರಣ್ಯ ಸಂಚಾರಿ ದಳ, 15.83 ಕೆ.ಜಿ. ಶ್ರೀಗಂಧದ ತುಂಡು, 25 ಕೆ.ಜಿ. ರಕ್ತ ಚಂದನ ತುಂಡು, 4.68 ಕೆ.ಜಿ. ಶ್ರೀಗಂಧದ ಪುಡಿ ಹಾಗೂ 5 ಕೆ.ಜಿ. ರಕ್ತ ಚಂದನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಕರ್ನಾಟಕ ಅರಣ್ಯ ನಿಯಮಾವಳಿ 1969 ರಡಿ ಪ್ರಕರಣ ದಾಖಲಿಸಲಾಗಿದೆ. ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಎರಡು ತಂಡವಾಗಿ ನಗರದಲ್ಲಿನ ಕರಕಶುಲ ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.