ಸೊರಬದಲ್ಲಿ ಜರುಗಿದ ಶ್ರೀ ಸೀತಾರಾಮ ದೇವರ ರಥೋತ್ಸವ. 
ನ್ಯೂಸ್

ಶ್ರೀ ಸೀತಾರಾಮಚಂದ್ರ ದೇವರ ರಥೋತ್ಸವ

ಸೊರಬ: ಪಟ್ಟಣದ ಮುಖ್ಯರಸ್ತೆಯ ಶ್ರೀ ಸೀತಾರಾಮಚಂದ್ರ ದೇವರ ರಥೋತ್ಸವ ಮಂಗಳವಾರ ಜರುಗಿತು. ತಾಲೂಕು ಗುಡಿಗಾರ ಸಮಾಜದಿಂದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ಪಟ್ಟಣದ ಮುಖ್ಯರಸ್ತೆಯಿಂದ ಶ್ರೀ ರಂಗನಾಥ ಸ್ವಾಮಿ ದೇವಾಲಯದವರೆಗೆ ಮತ್ತು ಹಿರೇಶಕುನದ ಮಾರಿಕಾಂಬಾ ದೇವಾಲಯದವರೆಗೆ ಭಜನೆ, ವಾದ್ಯ ಮೇಳದೊಂದಿಗೆ ನೆರವೇರಿತು. ಇದಕ್ಕೂ ಮೊದಲು ದೇವರ ಪ್ರತಿಷ್ಠಾಪನೆ, ಹೋಮ, ಹವನ, ಭಜನೆ ಸೇರಿ ಧಾರ್ಮಿಕ ಕೈಂಕರ್ಯಗಳು ಜರುಗಿದವು. ತಾಲೂಕಿನ ವಿವಿಧೆಡೆಯಿಂದ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ , ದೇವಕಿ ಪಾಣಿ, ಜಡೆ ಕೃಷ್ಣಮೂರ್ತಿ, ಶೇಷಾದ್ರಿ, ಶಿವಾನಂದ ಬಿಳಗಿ, ಅಣ್ಣಪ್ಪ ಗುಡಿಗಾರ್, ಗಣಪತಿ, ರಾಘವೇಂದ್ರ, ವೆಂಕಟೇಶ್, ಸುಬ್ರಹ್ಮಣ್ಯ ಗುಡಿಗಾರ್ ಇತರರಿದ್ದರು.