ಸುತ್ತೂರು: ಸುತ್ತೂರಿನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ಶುಕ್ರವಾರ ಸಂಜೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಶ್ರೀ ವೀರಸಿಂಹಹಾಸನ ಮಠಕ್ಕೆ ತರಲಾಯಿತು.
ಜಾತ್ರೆ ಅಂಗವಾಗಿ ಕರ್ತೃ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀಗಳ ಉತ್ಸವಮೂರ್ತಿಯನ್ನು ಶುಕ್ರವಾರ ಅಲಂಕೃತ ವಾಹನದಲ್ಲಿ ಕಲಾತಂಡಗಳ ಮೆರವಣಿಗೆಯಲ್ಲಿ ಕರೆತರುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು. ನೂರಾರು ಮಹಿಳೆಯರು ಕುಂಭ ಹೊತ್ತು ತಂದು ತೀರ್ಥಸ್ನಾನ ನೆರವೇರಿಸಿದರು. ಮಹಾರುದ್ರಾಭಿಷೇಕ, ಅಷ್ಟೋತ್ತರ ಶತ ಕುಂಭೋತ್ಸವ, ಪಂಚಾಮೃತ ಅಭಿಷೇಕವನ್ನು ಅರ್ಚಕರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಅನ್ನಬ್ರಹ್ಮೋತ್ಸವ, ನೈವೇದ್ಯದ ನಂತರ ಭಕ್ತರಿಗೆ ವಿತರಿಸಲಾಯಿತು.