ಎನ್.ಆರ್.ಪುರದ ಬಸ್ತಿಮಠದ ಶ್ರೀ ಜ್ವಾಲಾಮಾಲಿನಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು. 
ನ್ಯೂಸ್

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪುರ ಪ್ರವೇಶ

ಎನ್.ಆರ್.ಪುರ: ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಜಗದ್ಗುರು ಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣದ ನಂತರ ಮೊದಲ ಬಾರಿಗೆ ಪುರಪ್ರವೇಶ ಮಾಡಿದರು. ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬಸ್ತಿ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಬರಮಾಡಿಕೊಳ್ಳಲಾಯಿತು.

ನಂತರ ಭಗವಾನ್ ಶ್ರೀ 1008 ಚಂದ್ರಪ್ರಭ ತೀರ್ಥಂಕರ ಬಸದಿ ಹಾಗೂ ಮಹಾಮಾತೆ ಶ್ರೀಜ್ವಾಲಾಮಾಲಿನಿ ದೇವಿ ಬಸದಿಯಲ್ಲಿ ಶ್ರಾವಣಮಾಸದ 3ನೇ ಭಾನುವಾರದ ವಿಶೇಷ ಪೂಜೆ ನಡೆಯಿತು. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಎನ್.ಆರ್.ಪುರ ಶ್ರೀಜ್ವಾಲಾಮಾಲಿನಿ ಜೈನ್ ಮಹಿಳಾ ಮಂಡಳಿಯ ವಿಶೇಷ ಪೂಜಾ ಸೇವಾ ಕರ್ತೃಗಳಿಂದ ಶ್ರೀ ಜ್ವಾಲಾಮಾಲಿನಿ ದೇವಿಗೆ ಅಭಿಷೇಕ, ವಿಶೇಷ ಆರಾಧನೆ, ಅಷ್ಠಾವಧಾನ ಸೇವೆ, ಶೋಡೋಪಚಾರ ಸೇವೆ, ಉಯ್ಯಲೆ ಸೇವೆ ಹಮ್ಮಿಕೊಳ್ಳಲಾಗಿತ್ತು. ಗಾನ ವಿಶಾರದೆ ಜಯಶ್ರೀ ಧರಣೇಂದ್ರ ಹೊರನಾಡು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.