ನ್ಯೂಸ್

ಶೌಚಗೃಹದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ೊನ್ ನಂಬರ್ ಬರೆದ; ಕಿಡಿಗೇಡಿ ವಿರುದ್ಧ ಎ್ಐಆರ್

ಬೆಂಗಳೂರು: ಕಿಡಿಗೇಡಿಯೊಬ್ಬ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ೆನ್ ನಂಬರ್ ಅನ್ನು ಕಡೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪುರುಷರ ಶೌಚಗೃಹದಲ್ಲಿ ಬರೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸಂತ್ರಸ್ತ ಮಹಿಳಾ ಪೊಲೀಸ್ ಪೇದೆ ನೀಡಿದ ದೂರಿನ ಮೇರೆಗೆ ಕಡೂರು ಮೂಲದ ಆರೋಪಿ ಸತೀಶ್ ಎಂಬಾತನ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಏನಿದು ಪ್ರಕರಣ?: ಸಂತ್ರಸ್ತ ಮಹಿಳೆ ನಗರದ ಉಪವಿಭಾಗವೊಂದರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನ. 26ರಿಂದ ಅನಾಮಿಕ ವ್ಯಕ್ತಿಗಳು ಕರೆ ಬರತೊಡಗಿದ್ದವು. ಲೈಂಗಿಕ ವಿಚಾರವಾಗಿ ಮಾತನಾಡತೊಡಗಿದ್ದರು. ಕರೆ ಮಾಡಿದ್ದ ಪೈಕಿ ಇಬ್ಬರನ್ನು ವಿಚಾರಿಸಿದಾಗ, ಕಡೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪುರುಷ ಶೌಚಗೃಹದಲ್ಲಿ ೆನ್ ನಂಬರ್ ಬರೆದಿರುವ ವಿಚಾರವನ್ನು ತಿಳಿಸಿದ್ದರು.

ಮಹಿಳೆ 2006ರಲ್ಲಿ ಡಿ.ಎಡ್ ವ್ಯಾಸಂಗದ ವೇಳೆ ಆರೋಪಿ ಸತೀಶ್ ಸಹಪಾಠಿಯಾಗಿದ್ದ. 2017ರಲ್ಲಿ ಕಾಲೇಜಿನ ಸ್ನೇಹಿತರ ವ್ಯಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿತ್ತು. ಈ ವೇಳೆ ಸತೀಶ್ ಮಹಿಳೆಗೆ ಅನಾವಶ್ಯಕವಾಗಿ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸಿದ್ದ. ಈ ಬಗ್ಗೆ  ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿಯಾಗಿತ್ತು. ಇದೇ ವಿಚಾರವಾಗಿ ದ್ವೇಷ ಇಟ್ಟುಕೊಂಡಿರುವ ಶೌಚಗೃಹದಲ್ಲಿ ೆನ್ ನಂಬರ್ ಬರೆದಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಸಂತ್ರಸ್ತ ಮಹಿಳಾ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.