ನ್ಯೂಸ್

ಶೌಚಗೃಹಗಳ ಸುಸ್ಥಿತಿಗೆ ಜಿಪಂ ಸಿಇಒ ತಾಕೀತು

ಚಿತ್ರದುರ್ಗ: ಜಿಲ್ಲೆಯ ವಸತಿನಿಲಯ, ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳ ಶೌಚಗೃಹಗಳು ಸುಸ್ಥಿತಿಯಲ್ಲಿಡಲು ಅಗತ್ಯ ಕ್ರಮವಹಿಸುವಂತೆ ಜಿ ಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂದಲ್ಲಿ ಮಂಗಳವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಲಭ್ಯ ಅನುದಾನ ಬಳಸಿಕೊಂಡು ಈ ಶೌಚಗೃಹಗಳನ್ನು ದುರಸ್ಥಿಗೊಳಿಸಿ ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸಬೇಕೆಂದರು.

ಗ್ರಾಪಂ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಉತ್ತಮ ಶೌಚಗೃಹ ಸ್ಪರ್ಧೆ ಆಯೋಜಿಸಬೇಕು. ಸ್ಥ ಳೀಯ ಪ್ರಭಾವಿಗಳು, ಸ್ವಚ್ಛತಾ ರಾಯಭಾರಿಗಳನ್ನು ಗುರುತಿಸಿ ನಮ್ಮ ಶೌಚಗೃಹ-ನಮ್ಮ ಗೌರವ ವಿಶೇಷ ಆಂದೋಲನದಲ್ಲಿ ತೊಡಗಿಸಿ ಕೊಳ್ಳುವಂತೆ ಮನವಿ ಮಾಡಬೇಕು.

ಸ್ವಚ್ಛತಾ ಕಾರ್ಮಿಕರನ್ನು ಗುರುತಿಸಿ ಆರೋಗ್ಯ ಶಿಬಿರ ಏರ್ಪಡಿಸಬೇಕು. ಅವರಿಗೆ ಸುರಕ್ಷಾ ಕವಚಗಳನ್ನು ಒದಗಿಸಬೇಕು, ವಿವಿಧ ಯೋಜನೆಗಳಡಿ ದೊರೆಯುವ ಸೌಲಭ್ಯಗಳನ್ನು ಒದಗಿಸಲು ನೋಂದಾಯಿಸಿ, ಮಂಜೂರಾತಿಗೆ ಕ್ರಮವಹಿಸಬೇಕೆಂದರು.

ಜಿಪಂ ಮುಖ್ಯಯೋಜನಾಧಿಕಾರಿ ಗಾಯತ್ರಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಮೇಟಿ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಆ ರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮತ್ತಿತರ ಅಧಿಕಾರಿಗಳಿದ್ದರು.

----