ನ್ಯೂಸ್

ಶೈಕ್ಷಣಿಕ ಸಂಸ್ಥೆಗಳ ಬಸ್‌ಗಳ ತಪಾಸಣೆ / ೯.೬೦ ಲಕ್ಷ ರೂ ದಂಡ ವಸೂಲಿ / ಆರ್.ಟಿ.ಓ.ವೇಣುಗೋಪಾಲರೆಡ್ಡಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಶಾಲಾ-ಕಾಲೇಜುಗಳ ವಾಹನಗಳ ತಪಾಸಣಾ ಆಂದೋಲನದಲ್ಲಿ ೧೭೭ ಕೇಸ್ ದಾಖಲಿಸಿ ೯.೬೦ ಲಕ್ಷ ರೂ ದಂಡ ಹಾಗೂ ತೆರಿಗೆಯನ್ನು ವಸೂಲಿ ಮಾಡಲಾಗಿದೆ ಎಂದು ಆರ್.ಟಿ.ಓ. ಅಧಿಕಾರಿ ಎಂ.ವೇಣುಗೋಪಾಲರೆಡ್ಡಿ ತಿಳಿಸಿದ್ದಾರೆ.

ಏಪ್ರಿಲ್ ೨೦೨೫ ರಿಂದ ಸೆ.೧೮ ರವರೆಗೆ ಶೈಕ್ಷಣಿಕ ಸಂಸ್ಥೆಗಳ ಬಸ್‌ಗಳನ್ನು ತಪಾಸಣೆ ನಡೆಸಿ ೧೮ ವಾಹನಗಳನ್ನು ಸೀಸ್ ಮಾಡಲಾಗಿದ್ದು, ೪ ವಾಹನಗಳ ಆರ್‌ಸಿ ರದ್ದುಗೊಳಿಸಿ ಸ್ಕಾçಪ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೋಲಾರ ನಗರದ ಹೊರವಲಯದ ಅರ್ಕ ಶಾಲೆ ೪ ಬಸ್‌ಗಳ ಮೇಲೆ ಮೊಕದ್ದಮೆ ಹೂಡಲಾಗಿದ್ದು, ನರಸಾಪುರ ವಿದ್ಯಾನಿಕೇತನ ಶಾಲೆ ವಿರುದ್ಧ ೫, ಶ್ರೀನಿವಾಸಪುರ ವೇಣು ಶಾಲೆ ವಿರುದ್ಧ ೨, ರೋಣೂರು ವಿಐಪಿ ಶಾಲೆ ಮೇಲೆ ೨ ಕೇಸ್, ಬೆಂಗಳೂರು ಸೆಲೆಸೈಯನ್ ಶಾಲೆ ಎರಡು ಬಸ್ ಮೇಲೆ ಕೇಸ್ ದಾಖಲಿಸಲಾಗಿದೆ.

ಜಿಲ್ಲೆಯ ಪ್ರತಿಯೊಂದು ಶಾಲೆ-ಕಾಲೇಜಿಗೆ ಭೇಟಿ ನೀಡಿ ಬಸ್‌ಗಳನ್ನು ತಪಾಸಣೆ ನಡೆಸಿ ತೆರಿಗೆ, ವಿಮೆ, ಆರ್‌ಸಿ, ಎಫ್‌ಸಿ ಮುಂತಾದ ದಾಖಲೆಗಳನ್ನು ಪರಿಶೀಲಿಸಿ ಲೋಪ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ೧೫ ವರ್ಷ ಹಳೆಯದಾಗಿರುವ ಬಸ್‌ಗಳನ್ನು ಸ್ಥಳದಲ್ಲೇ ಸ್ಕಾçಪ್ ಮಾಡಲಾಗಿದೆ. ೨ನೇ ಮತ್ತು ೪ನೇ ಶನಿವಾರ, ಭಾನುವಾರದಂದೂ ತಪಾಸಣಾ ಕೆಲಸ ನಡೆಸಲಾಗಿದ್ದು, ಬ್ರೇಕ್ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್, ಮಹಮ್ಮದ್ ಹುಸೇನ್ ಹಾಗೂ ಮಂಜುನಾಥ್ ಅವರು ಆಂದೋಲನದ ಸಾರಥ್ಯ ವಹಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಆರ್‌ಟಿಓ ಅಧಿಕಾರಿ ಎಂ.ವೇಣುಗೋಪಾಲ ರೆಡ್ಡಿ ತಿಳಿಸಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೫ : ಆರ್.ಟಿ.ಓ. ಅಧಿಕಾರಿಗಳು ಶಾಲಾ-ಕಾಲೇಜು ಬಸ್ಸುಗಳನ್ನು ತಪಾಸಣೆ ನಡೆಸುತ್ತಿರುವುದು.