ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಉಪತಹಸೀಲ್ದಾರ್ ಅನುಪ್‌ಗೆ ಮನವಿ ಸಲ್ಲಿಸಲಾಯಿತು. ರಮೇಶ್, ತ್ಯಾಗರಾಜ್, ಕೆ.ಎಸ್.ರಮೇಶ್, ಬಿ.ಶಿವಶಂಕರ್, ಶ್ರೇಯಸ್, ಸುಧೀಂದ್ರ ಬೆಟ್ಟಗದ್ದೆ, ಕುಮಾರ್ ಭಟ್ ಇದ್ದರು. 
ನ್ಯೂಸ್

ಶೃಂಗೇರಿಯನ್ನು ಅತಿವೃಷ್ಟಿ ತಾಲೂಕಾಗಿ ಘೋಷಿಸಲು ಆಗ್ರಹ

ಶೃಂಗೇರಿ: ಅತಿವೃಷ್ಟಿ ತಾಲೂಕು ಎಂದು ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಸೋಮವಾರ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರ್ ಅನುಪ್‌ಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ನಾವು ತಹಸೀಲ್ದಾರ್ ಗೌರಮ್ಮ ಅವರಿಗೆ ಈ ಹಿಂದೆಯೇ ಮನವಿ ಸಲ್ಲಿಸುವ ಕುರಿತು ಮಾಹಿತಿ ನೀಡಿದ್ದರೂ ಅವರು ಬಂದಿರುವುದಿಲ್ಲ ಅವರಿಗಾಗಿ ನಾವು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಉಂಟಾಗಿದೆ. ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಈಗಾಗಲೇ ಶೇ.50ರಷ್ಟು ಬೆಳೆ ನಾಶವಾಗಿದೆ. ಕಾಳುಮೆಣಸು ಬಳ್ಳಿಗಳು ನೆಲ ಕಚ್ಚಿದ್ದು , ಶೀಘ್ರ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಬೆಳೆಹಾನಿ ಸಮೀಕ್ಷೆ ನಡೆಸಿರುವ ಮಾಹಿತಿಯನ್ನು ತಾಲೂಕು ಆಡಳಿತದ ಅಧಿಕಾರಿಗಳು ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಕಚೇರಿಗೆ ಬಂದರೆ ಯಾವ ಅಧಿಕಾರಿಗಳು ಇಲ್ಲ. ರೈತರ ಕುರಿತು ಅಧಿಕಾರಿಗಳಿಗೆ ಕಾಳಜಿ ಇಲ್ಲ. ಇವರ ನಿರ್ಲಕ್ಷೃದಿಂದ ಜನಸಾಮಾನ್ಯರ ಹಾಗೂ ರೈತರ ಕೆಲಸಗಳು ನನೆಗುದಿಗೆ ಬಿದ್ದಿವೆ. ಸೆಕ್ಷನ್ 41 ಸರ್ವೇ ಕೂಡಲೇ ಮಾಡಬೇಕು. ಅಕ್ರಮ-ಸಕ್ರಮ ಸಮಿತಿ ಸಭೆ ಕರೆದು ಕೂಡಲೇ ಅರ್ಜಿ ವಿಲೇವಾರಿ ಮಾಡಬೇಕು. 94ಸಿ ಮತ್ತು 94ಸಿಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್ ನಾಯ್ಕ, ಎಚ್.ಎಸ್.ಸುಬ್ರಹ್ಮಣ್ಯ, ದಿನೇಶ್ ಅಂಗುರ್ಡಿ, ಸತೀಶ್ ನಡುತೋಟ, ಸುರೇಶ್ ಜಟಿಗೇಶ್ವರ ಆಗ್ರಹಿಸಿದರು.