ನ್ಯೂಸ್

ಶುದ್ಧ ಕುಡಿವ ನೀರು ಪೂರೈಕೆ ನಮ್ಮ ಆದ್ಯ ಕರ್ತವ್ಯ

ಸರಗೂರು: ಹಂಚೀಪುರ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದ ಮನೆಗಳಿಗೆ ಶುದ್ಧ ಕುಡಿಯುವ ಪೂರೈಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಗೀತಾ ದೇವರಾಜಸ್ವಾಮಿ ತಿಳಿಸಿದರು.


ತಾಲೂಕಿನ ಮಸ ಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 10 ಲಕ್ಷ ರೂ. ವೆಚ್ಚದ 25 ಸಾವಿರ ಕ್ಯೂಸೆಕ್‌ನ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮಸಹಳ್ಳಿ ಗ್ರಾಮದಲ್ಲಿ ಗುಣಮಟ್ಟದ ಟ್ಯಾಂಕ್ ನಿರ್ಮಾಣ ಮಾಡಿ, ಆ ಮೂಲಕ ನೀರು ಪೂರೈಸಲಾಗು ವುದು ಎಂದು ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಪ್ಪ ಮಾತನಾಡಿದರು.


ಉಪಾಧ್ಯಕ್ಷೆ ಮಣಿ ನಾಗರಾಜು, ಸದಸ್ಯರಾದ ಎಂ.ನಟರಾಜು, ಮಂಜುಳಾ ಬಸವಣ್ಣ, ಮಂಜುಳಾ ಶಿವರಾಜು, ರುಕ್ಮಿಣಿ ಪುಟ್ಟಯ್ಯ, ಸ್ಥಳ ದಾನಿಗಳಾದ ಎಸ್.ಎನ್.ಮಹದೇವಪ್ಪ, ಯಜಮಾನ ಶಿವಸ್ವಾಮಿ, ಗ್ರಾಮಸ್ಥರಾದ ಬಸವಣ್ಣ, ಶಿವರಾಜು, ಸೂರ್ಯ, ಸಿದ್ದರಾಜು, ನೌಕರ ಗಜೇಂದ್ರ, ಗುತ್ತಿಗೆದಾರ ಕೆ.ಟಿ.ಹರೀಶ್ ಸೇರಿದಂತೆ ಮಸಹಳ್ಳಿ, ಸಿದ್ದಾಪುರ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಹಾಜರಿದ್ದರು.