ನ್ಯೂಸ್

ಶಿವಮೂರ್ತಿ ಶರಣರು ಒಳ್ಳೆಯ ಕೆಲಸ ಮಾಡಿ ಜೈಲಿಗೋದರು

ಚಿತ್ರದುರ್ಗ: ಒಳ್ಳೆಯ ಕೆಲಸ ಮಾಡಿ ಶಿವಮೂರ್ತಿ ಮುರುಘಾ ಶರಣರು ಜೈಲಿಗೆ ಹೋದರಲ್ಲ ಅಂತಹ ಧರ್ಮವನ್ನು ಪಾಲಿಸುತ್ತೇನೆ ಎಂದು ಎಸ್‌ಡಿಪಿಐ ಮುಖಂಡ ಬಾಳೆಕಾಯಿ ಶ್ರೀನಿವಾಸ್ ಹೇಳಿದರು.

ಮುಸ್ಲಿಂ ಸಮುದಾಯದಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಅಣ್ಣ ಬಸವಣ್ಣನ ಲಿಂಗಾಯತ ಧರ್ಮ ನಂಬುತ್ತೇನೆ. ಆದರೆ, ಈಗಿನ ಲಿಂಗಾಯತರು ಪಾಲಿಸುವ ಧರ್ಮವನಲ್ಲ ಎಂದರು.

ಇಸ್ಲಾಂ, ಬೌದ್ಧ ಧರ್ಮವನ್ನು ಆತ್ಮಪೂರ್ವಕವಾಗಿ ನಂಬುತ್ತೇನೆ. ಭಾರತದಲ್ಲಿರುವ ಹಿಂದು ಅತ್ಯಂತ ಒಳ್ಳೆಯ ಧರ್ಮ. ಆದರೆ, ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದವರು, ಓದದವರೇ ಹಿಂದು ಭಯೋತ್ಪಾದಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಧರ್ಮೀಯರಿಗೆ ಮುಖ್ಯವಾಗಿ ವೇದ, ಉಪನಿಷತ್ತಿನ ಅರಿವಿರಬೇಕು. ಇಲ್ಲದವರಿಂದಾಗಿ ಅನ್ಯ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ವಿಜಯದಶಮಿಯಂದು ರಾವಣ ಮೂರ್ತಿ ಸುಡಬೇಕು. ಆ ಜಾಗದಲ್ಲಿ ಮಹಮ್ಮದ್ ಪೈಗಂಬರ್ ಮೂರ್ತಿ ನಿರ್ಮಿಸಿ ಸುಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ಮನಸ್ಥಿತಿ ಕೆಟ್ಟದಾಗಿದ್ದು, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಉತ್ತರಪ್ರದೇಶದ ಯತಿ ನರಸಿಂಘಾನಂದ ಪೂಜಾರಿ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ಇಡೀ ಪೂಜಾರಿ ಸಮುದಾಯದ ಮಾರ್ಯಾದೆ ಕಳೆದಿದ್ದು, ಹಿಂದುತ್ವ ಬದಲು ಸಂವಿಧಾನ ಎತ್ತಿಹಿಡಿಯುವುದೇ ನಿಜವಾದ ದೇಶ ಭಕ್ತಿ ಎಂದರು.