ನ್ಯೂಸ್

ಶಿರಾ ಉಪ ಚುನಾವಣೆ ಜೆಡಿಎಸ್ ಟಿಕೆಟ್‌ಗೆ ಟ್ವಿಸ್ಟ್ -ಸಹೋದರನಿಗೆ ಟಿಕೆಟ್ ಕೇಳಿರುವ ಶಾಸಕ ಗೌರಿಶಂಕರ್ -ನನಗೆ ಬೇಡ, ಮಗನಿಗೆ ನೀಡಿ, ಸತ್ಯನಾರಾಯಣ ಪತ್ನಿ ಬೇಡಿಕೆ

-ನನಗೆ ಬೇಡ, ಮಗನಿಗೆ ನೀಡಿ, ಸತ್ಯನಾರಾಯಣ ಪತ್ನಿ ಬೇಡಿಕೆ

-ಸಹೋದರನಿಗೆ ಟಿಕೆಟ್ ಕೇಳಿರುವ ಶಾಸಕ ಗೌರಿಶಂಕರ್

ಶಿರಾ ಉಪ ಚುನಾವಣೆ ಜೆಡಿಎಸ್ ಟಿಕೆಟ್‌ಗೆ ಟ್ವಿಸ್ಟ್

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪರಮೋಚ್ಛ ನಾಯಕ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿರುವ ಗೌರಿ ಶಂಕರ್ ನನ್ನ ಸಹೋದರ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ.

ಈ ನಡುವೆ ಟಿಕೆಟ್ ವಿಚಾರ ಹೊಸ ತಿರುವು ಪಡೆದುಕೊಂಡಿದ್ದು, ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ನನ್ನ ಸಹೋದರನಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.

ಅನುಕಂಪದ ಅಲೆಯ ಮೇಲೆ ಗೆಲ್ಲುವ ಲೆಕ್ಕಾಚಾರದಲ್ಲಿ ದಿ.ಬಿ. ಸತ್ಯನಾರಾಯಣ ಅವರ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂಬ ಬಲವಾದ ಆಲೋಚನೆ ವರಿಷ್ಠರಲ್ಲಿದೆ.

ಶಿರಾ ಉಪ ಚುನಾವಣೆ ಟಿಕೆಟ್‌ಗೆ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಶುರುವಾಗಿದೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಈ ಕ್ಷೇತ್ರದ ಟಿಕೆಟ್‌ಗೆ ದಿ.ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್ ಕೂಡ ಲಾಬಿ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್ ವರಿಷ್ಠರು ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡುವತ್ತ ಒಲವು ಹೊಂದಿದ್ದಾರೆ. ಆದರೆ, ತಮಗೆ ಟಿಕೆಟ್ ಬೇಡ. ನನ್ನ ಮಗನಿಗೆ ನೀಡಿ ಎಂದು ಅಮ್ಮಾಜಮ್ಮ ಮಗನ ಪರ ವಕಾಲತ್ತು ವಹಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಶಿರಾ ಟಿಕೆಟ್ ಜೆಡಿಎಸ್ ವರಿಷ್ಠರಿಗೆ ಕಗ್ಗಂಟಾಗಿದೆ.