ಮೈಸೂರು ನಗರದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 02 ರಂದು ನಡೆಯಲಿರುವ ದಸರಾ ಮೆರವಣಿಗೆ ವೀಕ್ಷಣೆಗೆ ಸ್ಥಳೀಯ/ದೇಶ/ದೇಶಗಳಿಂದ ಜನರು ಆಗಮಿಸುವ ಕಾರಣ ಅತಿಯಾದ ಜನದಟ್ಟಣೆಯನ್ನು ನಿರೀಕ್ಷಿಸಲಾಗಿದೆ.
ಈ ವೇಳೆಯಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ಜನರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ರಸ್ತೆಯ ಎರಡು ಬದಿಯಲ್ಲಿ ಇರುವ ಹಳೆಯ/ಶಿಥಿಲ ಕಟ್ಟಡಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಜನರು ನಿಂತು ಜನದಟ್ಟಣೆ ಹೆಚ್ಚಾಗಿ ಅನಾಹುತಗಳಾಗುವ ಸಂಭವವಿದ್ದು, ಜನರ ಸುರಕ್ಷತೆಯ ಹಿನ್ನಲೆಯಲ್ಲಿ ಕರ್ನಾಟಕ ಮುನಿಸಿಪಲ್ ಕಾಯಿದೆ 1976 ರ ಅನುಚ್ಛೇದ 322 ರ ಅನ್ವಯ ಹಳೆಯ ಕಟ್ಟಡಗಳ ಮೇಲೆ ನಿಂತು ಜನರು ದಸರಾ ಮೆರವಣಿಗೆ ವೀಕ್ಷಣೆಯನ್ನು ನಿರ್ಭಂಧಿಸಿ ಆದೇಶ ಹೊರಡಿಸಲಾಗಿರುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರೆ.