ಸೊರಬ: ಮಕ್ಕಳ ಸರ್ವತೋಮುಖ ಪ್ರಗತಿಗೆ ಶಿಕ್ಷಕರ ಜತೆಗೆ ಪಾಲಕರ ಸಹಕಾರ ಮುಖ್ಯ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರೋಟರಿ ಕ್ಲಬ್‌ಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆ ಎಂಬುದು ಸಾಧಕನ ಸ್ವತ್ತು. ಸಾಧಿಸುವ ಛಲ ಇರುವವರಿಗೆ ಪ್ರತಿಲ ನಿಶ್ಚಿತ. ಮಕ್ಕಳ ಭವಿಷ್ಯವನ್ನು ಕೇವಲ ಅಂಕಗಳ ಆಧಾರದಲ್ಲಿ ನಿರ್ಧರಿಸಬಾರದು. ಜೀವನದಲ್ಲಿ ಶಿಕ್ಷಣದ ಜತೆಗೆೆ ಸಂಸ್ಕಾರವೂ ಮುಖ್ಯ. ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಬಿಇಒ ಆರ್.ಪುಷ್ಪಾ ಮಾತನಾಡಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಯಾವ ಕಾರಣಕ್ಕೂ ವಿಚಲಿತರಾಗದೆ ಪೂರಕ ಪರೀಕ್ಷೆಯಲ್ಲಿ ಪಾಸಾಗಿ ಮುಂದಿನ ವಿದ್ಯಾಭ್ಯಾಸ ಮಾಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಲಿಖಿತಾ, ಸಿರಿಗೌರಿ, ಅಮೂಲ್ಯಾ, ಸಮಯ್, ಗೌತಮ್, ಕೃತಿಕಾ, ಕೃಪಾ, ಪ್ರೀತಮ್, ಸೃಷ್ಟಿ, ಆಶಿಕ್, ಗಾನಶ್ರೀ, ಸಂಜಯ್, ಚಂದನಾ, ಸಂಜನಾ ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ನಿರಂಜನ್, ಮಾಜಿ ಅಧ್ಯಕ್ಷ ಡಾ. ನಾಗರಾಜ್, ಮಹಾಂತೇಶ್ ಸಣ್ಣಲಿಂಗಣ್ಣನವರ್, ಕೃಷ್ಣಪ್ಪ, ಕೆರಿಯಪ್ಪ ಡಿ. ಶಿವಯೋಗಿ ಇತರರಿದ್ದರು.