ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ಕುಮಾರ್ ತಮ್ಮ ಮನೆ ರಸ್ತೆ ಗುಡಿಸಿ ಸ್ವಚ್ಛಗೊಳಿಸಿದ್ದಾರೆ. ಮನೆ ಮುಂದಿನ ಅರ್ಧ ರಸ್ತೆಯನ್ನು ಪತ್ನಿ ಜತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಆಯಿತು.
ಪೌರಕಾರ್ವಿುಕರಾದ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು’ ಎಂದು ಫೋಟೋ ಸಹಿತ ತಮ್ಮ ಕಾರ್ಯವನ್ನು ಸುರೇಶ್ಕುಮಾರ್ ಟ್ವೀಟ್ ಮಾಡಿದ್ದರು.
ಸಚಿವರ ಸೈದ್ಧಾಂತಿಕ ವಿರೋಧಿಗಳೂ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.