ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಆದ್ಯತೆಯ ಕ್ಷೇತ್ರವಾಗಿ ಪರಿಗಣಿಸಿ ಶಿಕ್ಷಣ ಕ್ಷೇತ್ರವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳ ಪಟ್ಟಿಗೆ ಸೇರಿಸಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಪೋಷಕರು ಹುಡುಕಿ ಮಕ್ಕಳನ್ನು ಸೇರಿಸುವಂತೆ ಮಾಡಬೇಕೆಂದು ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆ ಬೋಧಿಸುವ ಶಿಕ್ಷಕರಿಗೆ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರವು ಬಡವರ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಸ್ವಾಗತಾರ್ಹ. ಶಿಕ್ಷಣವನ್ನು ಮೂಲೆಗುಂಪು ಮಾಡದೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳ ಸಮಯ ಬೇಕಿದ್ದರೆ ತೆಗೆದುಕೊಳ್ಳಲಿ, ಕ್ರಮಬದ್ದವಾದ ಕ್ರಿಯಾ ಯೋಜನೆ ರೂಪಿಸಿಕೊಂಡು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ನೀಡಬೇಕಾಗಿದೆ ಎಂದರು.
ರಾಜ್ಯಾದ್ಯAತ ಶಿಕ್ಷಣ ಇಲಾಖೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೆ ಸುಮಾರು ೫೨,೭೦೦ ಹುದ್ದೆ ಖಾಲಿ ಇವೆ ಶಿಕ್ಷಣ ಇಲಾಖೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪರಿಹಾರ ಹುಡುಕಬೇಕು. ರಾಜ್ಯದಲ್ಲಿ ಹಸಿವು ಮುಕ್ತ ಮಾಡಿದಂತೆ ಅನಕ್ಷರಸ್ಥ ಮುಕ್ತ ರಾಜ್ಯವಾಗಿ ಮಾಡಬೇಕು. ಖಾಯಂ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು ಈಗಿರುವ ಅತಿಥಿ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಸರ್ಕಾರಿ ಶಾಲೆಗೆ ಮಕ್ಕಳು ಹುಡುಕಿಕೊಂಡು ಬರಬೇಕು ಯಾವುದೇ ಸರ್ಕಾರಗಳು ಕೂಡ ಇದುವರೆಗೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಿಲ್ಲ. ಕೂಡಲೇ ಸಿದ್ದರಾಮಯ್ಯ ಸರಕಾರ ಶಿಕ್ಷಣ ಕ್ಷೇತ್ರವನ್ನು ಆಧ್ಯತೆಯಾಗಿ ಪರಿಗಣಿಸಬೇಕು ಎಂದರು.
ಹಿAದೆ ಶಿಕ್ಷಣ ಸೇವಾ ಕ್ಷೇತ್ರ ಆಗಿತ್ತು. ಈಗ ಶಿಕ್ಷಣ ಉದ್ಯಮವಾಗಿದೆ. ಶಿಕ್ಷಣ ತಜ್ಞರ ಸಂಖ್ಯೆ ಹೆಚ್ಚಿದೆ, ಶಿಕ್ಷಣ ಸಂಸ್ಥೆ ನಡೆಸುವವರೇ ಶಿಕ್ಷಣ ತಜ್ಞರಾಗಿರುವುದು ವಿಪರ್ಯಾಸವಾಗಿದೆ. ಶಿಕ್ಷಣ ಪರಿಭಾಷೆಯನ್ನು ಗ್ಯಾಟ್ ಒಪ್ಪಂದದಿAದಾಗಿ ಬದಲಾಗಿದೆ, ಮೌಲ್ಯ ಹೇಳುವುದು ನಿಜವಾದ ಶಿಕ್ಷಣ. ಪ್ರಾಧ್ಯಾಪಕರು ಹೆಚ್ಚಿದ್ದು, ಮೇಷ್ಟ್ರುಗಳು ಕಡಿಮೆ ಆಗಿದ್ದಾರೆ. ಕಲಿಸುತ್ತಾ ಕಲಿಯುವವನು ನಿಜವಾದ ಶಿಕ್ಷಕ ಅದು ಎಲ್ಲಾ ಮೇಷ್ಟ್ರುಗಳ ಜವಾಬ್ದಾರಿಯಾಗಿದೆ ಆದರೆ, ಕನ್ನಡ ಮೇಷ್ಟ್ರಗಳ ಜವಾಬ್ದಾರಿ ಅದಕ್ಕಿಂತ ಅಧಿಕವಾಗಿದೆ. ಆರ್ಥಿಕ ಭ್ರಷ್ಟಾಚಾರದಂತೆ ಭಾಷಿಕ ಭ್ರಷ್ಟಾಚಾರ ನಡೆಯುತ್ತಿದೆ. ಭಾಷಿಕ ಹಿಂಸೆ ನಡೆಯುತ್ತಿದೆ, ಕನ್ನಡ ಭಾಷೆ ಉಳಿಸುವ ಜೊತೆಗೆ ಮನುಷ್ಯನಿಗೆ ಮೌಲ್ಯ ತಿಳಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ, ಆ ಜವಾಬ್ದಾರಿ ಮೇಷ್ಟ್ರುಗಳ ಮೇಲಿದೆ ಎಂದರು.
ಸಮಾಜದಲ್ಲಿ ಬೇರೆಯವರ ವಿಚಾರಗಳು ಹಾಗೂ ಅನ್ಯಧರ್ಮಗಳ ಆಚರಣೆಗಳನ್ನು ಸಹಿಸಿಕೊಳ್ಳಬೇಕು ಆದರೆ ಇವತ್ತು ಅವುಗಳೆಲ್ಲವೂ ಬೀದಿ ಜಗಳವಾಗಿದೆ. ಭಕ್ತಿಯು ಮಂದಿರದಲ್ಲಿ ಇರಬೇಕಾಗಿತ್ತು, ದೇವರ ಹೆಸರಿನಲ್ಲಿ ಅನ್ಯಾಯ ನಡೆಯುತ್ತಾ ಇದ್ದು, ಭಕ್ತಿ ಸಹ ಬೀದಿಗೆ ಬಂದಿದೆ. ಕೆಲವರಿಗೆ ಭಕ್ತಿ ಬಂಡವಾಳವಾಗಿದೆ, ಮಕ್ಕಳಿಗೆ ಯಾವ ಧರ್ಮ ಪರ, ವಿರೋಧವನ್ನು ತಿಳಿಸದೇ ಜೀವನದ ಮೌಲ್ಯಗಳನ್ನು ತಿಳಿಸಬೇಕು. ಪಠ್ಯ ಪುಸ್ತಕದ ಬಗ್ಗೆ ಹೆಚ್ಚು ಮಾತನಾಡಲ್ಲ, ಯಾವುದೇ ಪಠ್ಯ ಪಕ್ಷ ಪುಸ್ತಕ ಆಗಬಾರದು, ಅದು ಕಾಂಗ್ರೆಸ್, ಬಿಜೆಪಿ, ಕೇಸರಿಕರಣ, ಕಮ್ಯುನಿಸ್ಟ್ ಪಠ್ಯ ಆಗಬಾರದು ಎಂದರು.
ಜಗತ್ತಿನಲ್ಲಿ ೬೭೦೩ ಭಾಷೆಗಳಿವೆ. ಸಣ್ಣಪುಟ್ಟ ೩೦ ಸಾವಿರ ಭಾಷೆಗಳು ಅಳಿದು ಹೋಗಿವೆ. ಶೇ ೫೦ ಭಾಗವನ್ನು ೧೦ ಭಾಷೆಗಳು ಆವರಿಸಿಕೊಂಡಿವೆ. ಅದರಲ್ಲಿ ಕನ್ನಡವೂ ಒಂದು. ಆದರೆ, ಜನರಲ್ಲಿ ತಪ್ಪು ಗ್ರಹಿಕೆ ಇದೆ. ಜನ ಬಳಕೆ, ಶಿಕ್ಷಣದ ಕನ್ನಡ ಕಲಿಕೆಯಿಂದ ಕನ್ನಡ ಉಳಿಯಲಿದೆ, ಕನ್ನಡಕ್ಕೆ ಆ ಶಕ್ತಿಯೂ ಇದೆ, ಇದು ಜನರ ಭಾಷೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. ಆಳಲು ಬಂದವರನ್ನು ಯಾವ ಭಾಷೆ ಅರಗಿಸಿಕೊಳ್ಳುತ್ತೋ ಆ ಭಾಷೆ ಉಳಿಯುತ್ತೆ. ನಾನು ಎಂ.ಎ.ಮಾಡಲು ಬೆಂಗಳೂರಿಗೆ ಬಂದಾಗ ತಮಿಳು ಆವರಿಸಿಕೊಳ್ಳಲಿದೆ ಎಂದಿದ್ದರು ಆದರೆ ಅದು ಸಾಧ್ಯವಾಗಿಲ್ಲ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ ಮೊಬೈಲ್ ರೀತಿಯಲ್ಲಿ ಎಲ್ಲರೂ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರಬೇಕು. ಪಠ್ಯಪುಸ್ತಕಗಳು ಹೊರತು ಪಡಿಸಿದ ಸಾಹಿತ್ಯದ ಅಂಶಗಳನ್ನು ತಿಳಿಸಿದಾಗ ಮಾತ್ರವೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಯಲು ಸಾಧ್ಯ. ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ತಿಳಿಸಬೇಕು, ಅಂಕ ಗಳಿಸುವುದು ಅಷ್ಟೇ ಬದುಕು ಅಲ್ಲ ಅದನ್ನು ಮೀರಿದ ಬದುಕು ಇದೆ ಎಂಬುದನ್ನು ಶಿಕ್ಷಕರು ಮಕ್ಕಳಲ್ಲಿ ತುಂಬಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ವಿಚಾರಧಾರೆಯ ಕಾರ್ಯಕ್ರಮವನ್ನು ನಾನಾ ಕಾರಣದಿಂದ ೧೪ ತಿಂಗಳಿAದ ಮುಂದೂಡಿಕೊAಡು ಬಂದಿದ್ದೆವು, ಬರಗೂರು ರಾಮಚಂದ್ರಪ್ಪ ಅವರು ತಮ್ಮ ವ್ಯಕ್ತಿತ್ವದ ಹಾದಿಯಲ್ಲಿ ಮತ್ತೊಬ್ಬರನ್ನು ರೂಪಿಸುತ್ತಿದ್ದಾರೆ ಅನೇಕ ಸಾಹಿತಿಗಳಿಗೆ, ಉಪನ್ಯಾಸಕ, ಅಧ್ಯಾಪಕರಿಗೆ ಬರಗೂರು ಮಾದರಿ ಆಗಿದ್ದಾರೆ. ಪ್ರತಿದಿನ ಶಿಕ್ಷಕರು ಓದಲೇಬೇಕು. ಪುಸ್ತಕ, ದಿನಪತ್ರಿಕೆ ಯಂತಹ ಚಟುವಟಿಕೆಗಳಲ್ಲಿ ಕಲಿಕೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಡಿಡಿಪಿಐ ಕೃಷ್ಣಮೂರ್ತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಆರ್.ಶಂಕರಪ್ಪ, ಪತ್ರಕರ್ತ ಕೆ.ಎಸ್.ಗಣೇಶ್, ಜಿಲ್ಲಾ ಕೋಶಾಧ್ಯಕ್ಷ ವಿನಯ್ ಗಂಗಾಪುರ್, ಶಂಕರೇಗೌಡ, ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ, ಮಧ್ಯಾಹ್ನದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಣ್ಣ, ಎ.ರಾಜಾ, ಚಿಕ್ಕದೇವೇಗೌಡ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಚಿತ್ರ ೧೨ ಕೆ.ಎಲ್.ಆರ್. ೦೩ : ನಗರದ ಟಿ.ಚನ್ನಯ್ಯ ರಂಗಮAದಿರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕನ್ನಡ ಭಾಷೆ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಿಲ್ಲಾ ಸಾಹಿತಿ ಪರಿಷತ್ತು ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಇದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೩ಎ : ಕಾರ್ಯಾಗಾರದಲ್ಲಿ ಭಾಗವಹಿಸಿರುವ ಕನ್ನಡ ಭಾಷಾ ಶಿಕ್ಷಕರು.