ಸರಗೂರು: ಶಿಕ್ಷಕರು ಮುಕ್ತ ಮನಸ್ಸು, ಪರಸ್ಪರ ನಂಬಿಕೆ ಮತ್ತು ಗೌರವದಿಂದ ಕಾರ್ಯ ನಿರ್ವಹಿಸಿದರೆ ಕಲಿಕೆಯ ಗುಣಮಟ್ಟ ಹೆಚ್ಚಿಸಬಹುದು ಎಂದು ತಾಲೂಕಿನ ಬಡಗಲಪುರ ಪ್ರೌಢಶಾಲೆ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಹೇಳಿದರು.
ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರಿ ಕೆಲಸ ನಿರ್ವಹಣೆ ಕಷ್ಟಕರ. ಇಂತಹ ಸಂದರ್ಭದಲ್ಲಿ ಗಡಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಪುಟ್ಟರಾಜು ಬೇರೆಡೆಗೆ ವರ್ಗವಣೆಯಾಗಿದ್ದಾರೆ ಎಂದರು.
ಇದೇ ವೇಳೆ ಪುಟ್ಟರಾಜು ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಕೂಸಪ್ಪ, ಗ್ರಾಮಸ್ಥರಾದ ಬಿ.ಸಿ.ರವಿ, ರಾಮಲಿಂಗೇಗೌಡ, ನಿಂಗರಾಜು, ಶಿಕ್ಷಕರಾದ ರಾಮನಾಯಕ, ವಿ.ಜಿ. ಮಲ್ಲಪ್ಪ, ಮಲ್ಲಿಕಾರ್ಜುನ ಇತರರು ಹಾಜರಿದ್ದರು.