ಹರಿಹರಪುರದಲ್ಲಿ ರೋಟರಿ ಸಮುದಾಯದಳ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಮಂಡಗಾರು ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ ಸಂಚನ್, ಲಕ್ಷ್ಮೀನಾರಾಯಣ್ ಇದ್ದರು. 
ನ್ಯೂಸ್

ಶಿಕ್ಷಕರಿಗೆ ಕರ್ತವ್ಯ ಪ್ರಹ್ಞೆ ಮುಖ್ಯ

ಕೊಪ್ಪ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಅವರ ಸಾಮಾಜಿಕ ಜವಾಬ್ದಾರಿ ಅಷ್ಟೇ ಮಹತ್ವವಾದುದು. ಹಾಗಾಗಿ ಶಿಕ್ಷಕ ಮಾಡುವ ತಪ್ಪಿಗೆ ಕ್ಷಮೆ ಇಲ್ಲ ಎಂಬ ಪ್ರಜ್ಞೆ ಶಿಕ್ಷಕರಲ್ಲಿ ಸದಾ ಜಾಗೃತವಾಗಿರಬೇಕು ಎಂದು ನಿವೃತ್ತ ಶಿಕ್ಷಕ ಮಂಡಗಾರು ಜನಾರ್ದನ್ ಹೇಳಿದರು.
ತಾಲೂಕಿನ ಹರಿಹರಪುರದಲ್ಲಿ ಶನಿವಾರ ರೋಟರಿ ಸಮುದಾಯದಳ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕ, ಪಾಲಕ, ಸಮಾಜ, ವ್ಯವಸ್ಥೆ ಈ ನಾಲ್ಕೂ ಸರಿಯಾಗಿದ್ದರೆ ಮಕ್ಕಳಿಗೆ ದೊರಕುವ ಶಿಕ್ಷಣ ಸರಿಯಾಗಿರುತ್ತದೆ. ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಎಂದರು.
ಕರ್ತವ್ಯದಲ್ಲಿ ಪ್ರಾಮಾಣಿಕತೆಯಿದ್ದರೆ ಸಮಾಜ ನಮ್ಮನ್ನು ಗುರುತಿಸುತ್ತದೆ. ಬದುಕಿನ ಪ್ರತಿ ಹಂತದಲ್ಲೂ ಸಮಾಜದ ಋಣ ನಮ್ಮ ಮೇಲಿರುತ್ತದೆ. ಈ ಪ್ರಜ್ಞೆಯೊಂದಿಗೆ ನಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಎಚ್.ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಮುದಾಯದಳದ ಅಧ್ಯಕ್ಷ ಬಿ.ಎಂ.ಸಂಚನ್, ಆನಂದ್ ಶೆಟ್ಟಿ, ಎ.ಒ.ವೆಂಕಟೇಶ್, ಕೆ.ಪಿ.ನಾಗರಾಜ್, ಲಕ್ಷ್ಮೀನಾರಾಯಣ್ ಇದ್ದರು.