ಬೈಲಕುಪ್ಪೆ: ಮಕ್ಕಳ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಭಾರತದ ಸತ್ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಇದಕ್ಕೆ ಪಾಲಕರೂ ಕೈಜೋಡಿಸಬೇಕು ಎಂದು ಕೊಪ್ಪ ಫ್ರೆಂಡ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಸದಸ್ಯ ದಿನೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಪ್ಪ ಫ್ರೆಂಡ್ಸ್ ರಿಕ್ರಿಯೇಯನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರೃ ದಿನ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಎಚ್ಚರಿಕೆ ವಹಿಸಬೇಕು ಎಂದರು.ಸಂಘದ ಅಧ್ಯಕ್ಷ ಜೆ.ಆರ್.ಲವಕುಮಾರ್, ಉಪಧ್ಯಕ್ಷ ಉಲ್ಲಾಸ್ ಮತ್ತು ಕಾರ್ಯದರ್ಶಿ ಶಿವಪ್ರಕಾಶ್ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆ ನಡೆಯಿತು.
ಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೀಲಾ ನಂದೀಶ್, ಪಿಡಿಒ ಸತೀಶ್, ಸದಸ್ಯರಾದ ರೇಣುಕಸ್ವಾಮಿ, ರಾಮಚಂದ್ರ, ಸಲೀಂ, ಸೈಯದ್ ರಿಯಾಜ್, ದಿನೇಶ್, ಮುಖಂಡರಾದ ಕಲ್ಯಾಣಪ್ಪ, ಕಲೀಮುಲ್ಲ, ಸಿಂಧು, ಬಸವರಾಜು, ಚಂದ್ರು, ಶೇಕ್‌ಅಸ್ಲಾಂ, ಸೈಯದ್ ರಿಯಾಜ್ ಇತರರಿದ್ದರು.