ಕೆ.ಆರ್.ನಗರ: ಪಟ್ಟಣದ ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಸ್.ಮೋಹನ್‌ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎಂ.ಎನ್.ಮಹಾದೇವಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಚಂದ್ರಮೌಳೇಶ್ವರ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಎಸ್.ಮೋಹನ್‌ಕುಮಾರ್ ಮತ್ತು ಎಂ.ಎನ್.ಮಹಾದೇವಪ್ಪ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಸವಿತಾ ಅವಿರೋಧ ಆಯ್ಕೆ ಪ್ರಕಟಿಸಿದರು.
ನಿರ್ದೇಶಕರಾದ ಶ್ರೀಧರ, ಎಚ್.ಟಿ.ಜಯರಾಮು, ರಾಮನಾಯಕ, ಜಿ.ಆರ್.ದೇವರಾಜೇಗೌಡ, ಎಸ್.ಪಿ.ಕುಮಾರಶೆಟ್ಟಿ, ವಿ.ಸರ್ವಮಂಗಳಾ, ಎಂ.ಸಿ.ಚಿತ್ರಶೇಖರ, ಪಿ.ರವಿಕುಮಾರ್, ವಿರೂಪಾಕ್ಷ, ಪುಟ್ಟಣ್ಣಯ್ಯ, ಜಿ.ಕವಿತಾ, ಕಾರ್ಯದರ್ಶಿ ಕೆ.ಎಸ್.ಗಂಗಾಧರ, ಉಪ-ಕಾರ್ಯದರ್ಶಿ ಎ.ವಿಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಒಂಟಿಮನೆ ನಾಗರಾಜು, ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ರಾಜಶೇಖರ, ಬಿ.ವಿ.ಪ್ರಸನ್ನಕುಮಾರ್, ಕೃಷ್ಣನಾಯಕ, ನಿರ್ದೇಶಕರಾದ ಸಿ.ಎನ್.ಸ್ವಾಮಿ, ಭಾರತಿ, ಸುರೇಶ್, ಸಿ.ಎನ್.ಮಹದೇವ್ ಹಾಗೂ ಸಂಘದ ಸದಸ್ಯರಿದ್ದರು.