ಬಾಳೆಹೊನ್ನೂರು ಜೆಸಿಐನಿಂದ ಎಂ.ಕೆ.ಪುಟ್ಟರಾಜು ಅವರನ್ನು ಗೌರವಿಸಲಾಯಿತು. ಇಬ್ರಾಹಿಂ ಶಾಫಿ, ಕೆ.ಎಂ.ರಾಘವೇಂದ್ರ, ರವಿಚಂದ್ರ, ಸೈಯ್ಯದ್ ಾಜಿಲ್, ಚೈತನ್ಯ ವೆಂಕಿ, ಅಶೋಕ್ ಇತರರಿದ್ದರು. 
ನ್ಯೂಸ್

ಶಿಕ್ಷಕರ ಗೌರವಿಸುವುದು ಕರ್ತವ್ಯ

ಬಾಳೆಹೊನ್ನೂರು: ಸಮಾಜಕ್ಕಾಗಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.

ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ಕೆ.ಪುಟ್ಟರಾಜು ಅವರನ್ನು ಗೌರವಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲ ವೃತ್ತಿಗಳನ್ನು ಸೃಷ್ಟಿ ಮಾಡುವ ಏಕೈಕ ಶಕ್ತಿ ಶಿಕ್ಷಕ ವೃತ್ತಿಗಿದೆ. ಭಾರತದಲ್ಲಿ ಪ್ರತಿ ವರ್ಷ ಸೆ.5ರಂದು ರಾಷ್ಟ್ರೀಯ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಆದರೆ 100ಕ್ಕೂ ಹೆಚ್ಚು ದೇಶಗಳು ಅ.5ರಂದು ವಿಶ್ವ ಶಿಕ್ಷಕರ ದಿನಾಚರಣೆ ಆಯೋಜಿಸುತ್ತವೆ ಎಂದರು.

ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಮಾತನಾಡಿ, ಶಿಕ್ಷಕ ವೃತ್ತಿ ಜವಾಬ್ದಾರಿಯುತವಾದುದು. ಈ ವೃತ್ತಿಗೆ ಇರುವ ಗೌರವವೇ ವಿಶೇಷ. ಶಿಕ್ಷಕರು ನಿಸ್ವಾರ್ಥದಿಂದ ವಿದ್ಯಾರ್ಥಿಗಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.

ಶಿಕ್ಷಣ ಎಂಬುದು ಸಮಾಜವನ್ನು ಬದಲಾಯಿಸುವ ಪ್ರಮುಖ ಅಸ. ಈ ಕ್ಷೇತ್ರದಲ್ಲಿ ತೊಡಗಿಕೊಂಡರೆ ಸಮಾಜ ಸೇವೆಯ ತೃಪ್ತಿ ದೊರೆಯುತ್ತದೆ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಜೆಸಿಐ ಸ್ಥಾಪಕ ಅಧ್ಯಕ್ಷ ಸೈಯ್ಯದ್ ಾಜಿಲ್ ಹುಸೇನ್, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಉಪನ್ಯಾಸಕ ಸೋಮೇಶ್‌ಗೌಡ, ಮಮತಾ ಸೋಮೇಶ್, ಜೇಸಿ ಕಾರ್ಯದರ್ಶಿ ವಿ.ಅಶೋಕ್, ಸದಸ್ಯ ರಂಜಿತ್ ಮತ್ತಿತರರಿದ್ದರು.