ಬಾಳೆಹೊನ್ನೂರು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶಿಕಾರಿಗೆ ಕೊಂಡೊಯ್ದ ಬಂದೂಕನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪದ ಕಸ್ಕೇಮನೆಯ ಕೆ.ಕೆ.ರಮೇಶ್ ಆರೋಪಿ. ಈತ ಬಸವನಕೋಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಬಂದೂಕು ಸಮೇತ ಶಿಕಾರಿಗೆ ತೆರಳಿದ್ದ.
ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೋಡಿದ ಕೂಡಲೇ ಆರೋಪಿ ಬಂದೂಕನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು, ಕತ್ತಿ, ಟಾರ್ಚ್ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.·
ಆರ್‌ಎ್ಒ ನೇಹಾ, ಡಿಆರ್‌ಎ್ಒ ಮಂಜುನಾಥ್, ಅರಣ್ಯ ರಕ್ಷಕರಾದ ದೀಕ್ಷಿತ್, ಕಾರ್ತಿಕ್, ಚಾಲಕ ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.