ವಿಜಯವಾಣಿ ಸುದ್ದಿಜಾಲ ಕೋಲಾರ
ಕೆ.ವೈ.ನಂಜೇಗೌಡರೇ ಆಕಸ್ಮಿಕ ನಿರ್ದೇಶಕ ನಾನಲ್ಲ ಆಕಸ್ಮಿಕವಾಗಿ ಶಾಸಕರಾಗಿರುವುದು ನೀವು. ಕೋಚಿಮುಲ್ ಕ್ಷೇತ್ರ ವಿಂಗಡಣೆ ಕುರಿತು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ನೀವು ಯಾಕೆ ಮಾತನಾಡುತ್ತೀರಿ. ನಿಮಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲವೆಂದು ಕೋಚಿಮುಲ್ ಮಾಜಿ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಟಾಂಗ್ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೧೮ರ ಚುನಾವಣೆಯಲ್ಲಿ ಆಕಸ್ಮಿಕವಾಗಿ ಶಾಸಕರಾಗಿದ್ದು, ಅಲ್ಲದೇ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ೨೪೮ ಮತಗಳ ಅಂತರದಿAದ ಗೆದ್ದಿದ್ದೀರಿ. ಹೀಗಾಗಿ ಎರಡೂ ಬಾರಿ ಆಕಸ್ಮಿಕವಾಗಿ ಶಾಸಕರಾಗಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ನೀವು ಎಲ್ಲಾ ಪಕ್ಷಗಳನ್ನು ನೋಡಿಕೊಂಡು ಬಂದಿದ್ದೀರಿ. ಹೀಗಿರುವಾಗ ನನ್ನ ನಿರ್ದೇಶಕ ಸ್ಥಾನದ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಅಭಿವೃದ್ಧಿಗೆ ಕೈಜೋಡಿಸಿದ್ದೆವು:
ವಿಭಜನೆ ವಿಚಾರದಲ್ಲಿ ಜಿಲ್ಲೆಗೆ ಅನುಕೂಲ ಆಗಲಿ ಎಂದು ನಿಮ್ಮ ಎಲ್ಲ ಅಭಿವೃದ್ಧಿ ವಿಚಾರದಲ್ಲಿ ಕೈಜೋಡಿಸಿದ್ದೆವು ಹೊಳಲಿ ಬಳಿಯ ಜಮೀನನ್ನು, ರೈತರಿಂದ ಒತ್ತುವರಿ ತೆರವು ವಿಚಾರದಲ್ಲಿ ಎಷ್ಟು ಶ್ರಮ ಪಟ್ಟಿದ್ದೇನೆ ಎಂದು ಎರಡು ಜಿಲ್ಲೆಯ ಜನತೆಗೆ ಗೊತ್ತಿದೆ ನಾನು ನಿಮ್ಮ ಹಾಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿ ಬಣ್ಣ ಬದಲಾಯಿಸುವ ವ್ಯಕ್ತಿಯಲ್ಲ ಎಂದು ಹೇಳಿದರು.
ಕ್ಷೇತ್ರ ವಿಂಗಡಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಹಕ್ಕು ಮಾಜಿ ನಿರ್ದೇಶಕರಿಗೆ ಇದೆ ಒಕ್ಕೂಟದ ಎಂಡಿ ಗೋಪಾಲಮೂರ್ತಿರನ್ನು ಪ್ರಶ್ನೆ ಮಾಡಿದರೆ ನೀವು ಯಾಕೆ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ. ಅಧಿಕಾರಿಗಳಿಗೆ ಯಾವ ರೀತಿಯಲ್ಲಿ ಒತ್ತಡ ಕೊಟ್ಟಿರಬಹುದು ಒಕ್ಕೂಟ ಆಡಳಿತಾಧಿಕಾರಿ ಸಹ ತನ್ನ ಅಸಹಾಯಕತೆ ಬಗ್ಗೆ ಮಾಧ್ಯಮಗಳ ಎದುರು ಒಪ್ಪಿಕೊಂಡಿದ್ದಾರೆ ನೀವು ಎಂಡಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ ಇದರಲ್ಲಿ ಯಾವುದೋ ಉನ್ನಾರ ಇರಬಹುದಾ ಎಂದು ಪ್ರಶ್ನೆ ಮಾಡಿದರು.
ಸಹಕಾರಿ ಇಲಾಖೆಯ ಆದೇಶದಂತೆ ಚುನಾವಣೆಗೆ ಹಾಗೂ ಕ್ಷೇತ್ರ ವಿಂಗಡಣೆಗೆ ಸಂಬAಧಿಸಿದAತೆ ೩೦ ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿರಬೇಕು ಮಾಧ್ಯಮ ಪ್ರಕಟಣೆ ಮಾಡಬೇಕು ಸಂಘಗಳಿಗೆ ನೋಟೀಸ್ ಕೊಡಬೇಕು ಅದು ಯಾವುದು ಇಲ್ಲದೇ ಹೇಗೆ ವಿಂಗಡಣೆ ಮಾಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಪ್ರಶ್ನೆ ಮಾಡಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.
ಒಕ್ಕೂಟದಲ್ಲಿ ಐದು ವರ್ಷಗಳ ಕಾಲ ನಿರ್ದೇಶಕನಾಗಿ ಅಭಿವೃದ್ಧಿಗೆ ಸಹಕಾರ ನೀಡಿದ್ದರೂ ವಿರೋಧ ಪಕ್ಷದವರೆಂದು ಹೇಳಿದ್ದೀರಿ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ನೀವೂ ಕೂಡ ಜಿಲ್ಲೆಯ ಪ್ರಭಾವಿ ಶಾಸಕರಾಗಿದ್ದೀರಿ. ಹಾಗಾಗಿ ಕೋಚಿಮುಲ್‌ನಲ್ಲಿ ೫ ವರ್ಷದ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರದಿಂದಲ್ಲೇ ತನಿಖೆ ಮಾಡಿಸಿ ಅದಕ್ಕೆ ನಾನು ಕೂಡ ಸಂಪೂರ್ಣ ಸಹಕಾರ ನೀಡಿ, ಸ್ವಾಗತಿಸುವುದಾಗಿ ಹೇಳಿದ್ದಾರೆ.
ಬಾಕ್ಸ್...
ಇನ್ನು ನಿಮ್ಮದೇ ಕಾಂಗ್ರೆಸ್ ಪಕ್ಷದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೋಚಿಮುಲ್ ವಿಚಾರವಾಗಿ ನಾನಾ ಆರೋಪಗಳನ್ನು ಮಾಡಿ ಒಂದಿಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ. ಅದಕ್ಕೆ ಸಾರ್ವಜನಿಕವಾಗಿ ಉತ್ತರ ನೀಡದೆ ಯಾಕೆ ನಾಜೂಕಾಗಿ ಜಾರಿಕೊಂಡಿದ್ದೀರಿ. ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ನಿಮ್ಮಂತಹ ಅಧ್ಯಕ್ಷರೊಂದಿಗೆ ೫ ವರ್ಷ ಕೆಲಸ ಯಾಕಾದರೂ ಮಾಡಿದ್ದೇನೆ ಎಂದು ಬೇಸರವಾಗುತ್ತಿದೆ. ನಿಮ್ಮ ಜೊತೆಯಲ್ಲಿ ಮತ್ತೆ ಆಡಳಿತ ಮಂಡಳಿಗೆ ಬರಬೇಕಾ ಬೇಡವಾ ಎಂದು ಹಿತೈಷಿಗಳೊಂದಿಗೆ ಚರ್ಚೆ ಮಾಡಬೇಕಾದ ಸಂದರ್ಭದಲ್ಲಿ ಇದ್ದೇನೆ. ಇನ್ನಾದರೂ ಇಂತಹ ಮಾತುಗಳನ್ನಾಡದೆ ಇರುವುದು ಸೂಕ್ತ ಎಂದು ತಿರುಗೇಟು ನೀಡಿದ್ದಾರೆ.
ಚಿತ್ರ ೧೨ ಕೆ.ಎಲ್.ಆರ್. ೦೫ : ಕೋಚಿಮುಲ್ ಮಾಜಿ ನಿರ್ದೇಶಕ ಡಿ.ವಿ.ಹರೀಶ್ ರವರ ಭಾವಚಿತ್ರ