ನ್ಯೂಸ್

ಶಾಲೆಗಳ ಬಿಸಿಯೂಟದಲ್ಲಿ ಇಂದಿಗೂ ಅಸ್ಪ÷Èಶ್ಯತೆ ಜೀವಂತ! / ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀನಿವಾಸನ್ ವಿಷಾದ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯೂ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ದಲಿತರು ಮಾಡಿರುವ ಬಿಸಿಯೂಟವನ್ನು ವಿದ್ಯಾರ್ಥಿಗಳು ಮತ್ತು ಆ ಶಾಲೆಯ ಶಿಕ್ಷಕರು ಸೇವಿಸದಂತಹ ವಾತಾವರಣ ಇದೆ ಎಂದು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಶಿಕ್ಷಣ ಸಂಯೋಜಿ ಆ.ಶ್ರೀನಿವಾಸನ್ ವಿಷಾದಿಸಿದರು.

ಕೋಲಾರ ಜಿಲ್ಲಾ ಭಾರತ ಸೇವಾದಳವತಿಯಿಂದ ಆಯೋಜಿಸಿದ್ದ ೧೩೪ ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುತೇಕ ಶಾಲೆಗಳಲ್ಲಿ ಸರ್ಕಾರದ ಆದೇಶ ಇದೆ ಎಂಬ ಕಾರಣಕ್ಕೆ ಮಾತ್ರವೇ ಕಾಟಾಚಾರದಿಂದ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ, ಅದೇ ಶಾಲೆಗಳಲ್ಲಿ ದಲಿತ ಅಡುಗೆಯವರು ತಯಾರಿಸಿದ ಬಿಸಿಯೂಟವನ್ನು ಕೆಲವೆಡೆ ವಿದ್ಯಾರ್ಥಿಗಳು ಸೇವಿಸುವುದಿಲ್ಲ. ಶಿಕ್ಷಕರು ಸೇವಿಸದೆ ಅಸ್ಪ÷Èಶ್ಯತೆಯನ್ನು ಆಚರಿಸುತ್ತಿದ್ದಾರೆ. ಮನಸ್ಸಿನಲ್ಲಿ ಇಷ್ಟೊಂದು ಕೊಳಕು ಇಟ್ಟುಕೊಂಡು ಅಂಬೇಡ್ಕರ್ ಜಯಂತಿ ಆಚರಿಸುವುದರಿಂದ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ವಿದ್ಯಾವಂತರು ಎಂದರೆ ಜ್ಞಾನವನ್ನು ಹೊಂದಿರುವವರು ಎಂಬ ಭಾವನೆ ಇದೆ, ಆದರೆ, ಬಹುತೇಕ ವಿದ್ಯಾವಂತ ವರ್ಗವೇ ಪರೋಕ್ಷವಾಗಿ ಅಸ್ಪ÷Èಶ್ಯತೆಯನ್ನು ಆಚರಿಸುತ್ತಿದೆ, ಅವಿದ್ಯಾವಂತರು ಜಾತಿ, ಮತ, ಧರ್ಮಗಳನ್ನು ನೋಡದೆ ಒಲ್ಲರೊಂದಿಗೆ ಹೊಂದಿಕೊAಡು ಹೋಗುವ ಗುಣ ಹೊಂದಿರುತ್ತಾರೆ. ಇದರಿಂದ ತಮಗೆ ವಿದ್ಯಾವಂತರು, ಅವಿದ್ಯಾವಂತರು ಯಾರು ಎಂಬ ಗುಮಾನಿ ಹುಟ್ಟುವಂತಾಗಿದೆ ಎಂದರು.

ಅAಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ್ದುö, ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಅಸಮಾನತೆ ಆಚರಣೆಗಳನ್ನು ನಿಲ್ಲಿಸಬೇಕು ಎಂದರು.

ಹಿರಿಯ ಸೇವಾದಳ ನಾಯಕ ವಿ.ಪಿ.ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಸಮಾಜಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು, ಭೂಮಂಡಲ ಇರುವವರೆವಿಗೂ ಅವರು ನೊಂದ ಜೀವಿಗಳಿಗೆ ಆಪ್ತರಾಗಿರುತ್ತಾರೆ, ಜ್ಯೋತಿಯ ರೀತಿ ಜಗತ್ತಿಗೆ e್ಞÁನದ ಬೆಳಕನ್ನು ಹರಡುತ್ತಿರುತ್ತಾರೆ, ಅಂಬೇಡ್ಕರ್‌ರ ೧೨೫ ನೇ ಜಯಂತಿ ಸಂದರ್ಭದಲ್ಲಿ ಕೇಂದ್ರ ಸರಕಾರವು ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಿತ್ತು ಎಂದು ಸ್ಮರಿಸಿಕೊಂಡರು.

ಹಿರಿಯ ಸೇವಾದಳ ಸದಸ್ಯ ಬಹಾದ್ದೂರ್ ಸಾಬ್, ಚಾಮುಂಡೇಶ್ವರಿ, ಕೆ.ಜಯದೇವ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಗೋಕುಲ ಚಲಪತಿ, ಮುನಿವೆಂಕಟ ಯಾದವ್, ರಾಜೇಶ್‌ಸಿಂಗ್, ಚಾನ್ ಪಾಷಾ, ಶಹೀನ್‌ಷಾ ಇತರರು ಹಾಜರಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೫ : ಕೋಲಾರ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್‌ರ ೧೩೪ ನೇ ಜನ್ಮ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.