ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಸರ್ಕಾರ ಅಜೀಂಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ಲೋಪವಾದಂತೆ ಎಚ್ಚರವಹಿಸಿ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಶಿಕ್ಷಕರಿಗೆ ಸೂಚಿಸಿದರು.
ಜಿಲ್ಲಾಡಳಿತ, ಜಿಪಂ, ಪ್ರಧಾನಮಂತ್ರಿ ಪೋಷಣ್ ಶಕ್ತಿ ಅಭಿಯಾನ್ ಆಶ್ರಯದಲ್ಲಿ ನಗರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತು ಅಜೀಂಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ವಾರದ ಎಲ್ಲಾ ೬ ದಿನ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ೧೮೫ ಮಕ್ಕಳಿರುವ ಈ ಶಾಲೆಗೆ ಅಗತ್ಯವಿರುವ ಎರಡು ಕೊಠಡಿಗಳನ್ನು ತಾವು ಹಾಗೂ ಗೋವಿಂದರಾಜು ಅವರ ಅನುದಾನದಲ್ಲಿ ಒದಗಿಸುವ ಭರವಸೆ ನೀಡಿದರು.
ಸರ್ಕಾರಿ ಶಾಲೆಗಳ ೧ರಿಂದ ೧೦ನೇ ತರಗತಿ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ವಿತರಿಸುತ್ತಿದ್ದು, ಇದರಿಂದ ಮಕ್ಕಳ ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ. ಶಾಲೆಗಳ ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಿ, ಸರ್ಕಾರಿ ಶಾಲೆಗೆ ಬರುವುದು ಬಡ ಮಕ್ಕಳೇ ಅವರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಿ ಎಂದರು.
ಹಗರಣಗಳಿಗೆ ಅವಕಾಶ ಬೇಡ :
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮೊಟ್ಟೆ ಖರೀದಿ, ವಿತರಣೆಯಲ್ಲಿ ಹಗರಣವಾಗಲು ಅವಕಾಶ ನೀಡದಿರಿ, ಮಕ್ಕಳಿಗೆ ಮೊಟ್ಟೆಯ ಗುಣಮಟ್ಟ ಪರಿಶೀಲಿಸಿ ನಂತರ ವಿತರಿಸಿ, ಕಳಪೆಯಾಗಿದ್ದರೆ ಅದು ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಮಕ್ಕಳಿಗೆ ಪಠ್ಯದ ಜತೆಗೆ ಅತಿ ಮುಖ್ಯವಾಗಿ ಸಂಸ್ಕಾರ ಕಲಿಸಿ, ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ದೇಶದ ಮಹಾನ್ ಸಾಧಕರಾಗಿದ್ದು, ಕೀಳಿರಿಮೆ ಬಿಟ್ಟು ಓದಿ ಉತ್ತಮ ಸಾಧಕರಾಗಿ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ ಮಾತನಾಡಿ, ಸರ್ಕಾರಿ ಶಾಲೆಗೆ ಬರುವುದು ಬಡ ಮಕ್ಕಳು ಅವರ ಆರೋಗ್ಯಕ್ಕಾಗಿ ಅಪೌಷ್ಟಿಕತೆ ನೀಗಲು ನೀಡಿರುವ ಈ ಸೌಲಭ್ಯ ಸದುಪಯೋಗವಾಗಲಿ, ಇದರಲ್ಲಿ ಯಾವುದೇ ತಪ್ಪು ಎಸಗದಂತೆ ಎಚ್ಚರವಹಿಸಿ ಎಂದು ಕೋರಿದರು.
ಪ್ರಭಾರ ಡಿಡಿಪಿಐ ವೀಣಾ, ಪ್ರಧಾನಮಂತ್ರಿ ಪೋಷಣ್ ಶಕ್ತಿ ಅಭಿಯಾನ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಸಿಆರ್‌ಪಿ ಸುರೇಶ್, ಮುಖ್ಯಶಿಕ್ಷಕಿ ಸರೋಜಮ್ಮ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ಬಿ.ರಮೇಶ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಗೋಪಾಲಗೌಡ, ಜಿಪಂ ಲೆಕ್ಕಾಧಿಕಾರಿ ಗಂಗಾಧರ್, ತಾಪಂ ಇಒ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಶಿಕ್ಷಣಾಧಿಕಾರಿ ಸಗೀರಾ ಅಂಜುA, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಬ್ರಮಣಿ, ವಿಷಯಪರಿವೀಕ್ಷಕ ಸನಾವುಲ್ಲ, ಇಲಾಖೆಯ ಹೇಮಂತ್, ನಗರಸಭಾ ಸದಸ್ಯರಾದ ಭಾಗ್ಯಮ್ಮ, ಅಪ್ಸರ್, ಏಜಾಜ್, ಪೈರೋಜ್, ವೆಂಕಟರಾA, ರಫಿ, ವಿಶ್ವನಾಥ್, ಎಸ್‌ಡಿಎಂಸಿ ಅಧ್ಯಕ್ಷೆ ವಿದ್ಯಾಶ್ರೀ, ಶಿಕ್ಷಕರಾದ ಕಲಾವತಿ, ಅನಿಲ್, ಲಕ್ಷö್ಮಕ್ಕ, ರತ್ನಾಬಾಯಿ, ಸ್ವಪ್ನ, ಮಂಜುಳಾ, ವಿಶ್ವನಾಥ್ ಮತ್ತಿತರರಿದ್ದರು.
ಚಿತ್ರ ೨೪ ಕೆ.ಎಲ್.ಆರ್. ೦೬ : ಕೋಲಾರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತು ಅಜೀಂಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ವಾರದ ಎಲ್ಲಾ ೬ ದಿನ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಚಾಲನೆ ನೀಡಿದರು. ಎಂ.ಎಲ್.ಸಿ. ಇಂಚರ ಗೋವಿಂದರಾಜು, ನಗರಸಭಾ ಅಧ್ಯಕ್ಷ ಲಕ್ಷಿö್ಮÃದೇವಮ್ಮ ಇದ್ದರು.