ನ್ಯೂಸ್

ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ `ಸಸ್ಯಶ್ಯಾಮಲ' ಯೋಜನೆಗೆ ಚಾಲನೆರಾಜ್ಯಾದ್ಯಂತ ಶಾಲಾವರಣದಲ್ಲಿ ೫೦ಲಕ್ಷ ಗಿಡ ನೆಡಲು ಸರ್ಕಾರ ಸಿದ್ದತೆ/ಅನಿಲ್‌ಕುಮಾರ್

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಂದಿನ ಪೀಳಿಗೆಗಾಗಿ ಗಿಡಮರ ಬೆಳೆಸೋಣ, ಆರೋಗ್ಯಕರ ವಾತಾವರಣ ಸೃಷ್ಟಿಗೆ ಕಾರಣರಾಗೋಣ ಎಂಬ ಪ್ರತಿಜ್ಞೆಯನ್ನು ಶಾಲಾ ಮಕ್ಕಳು ಸ್ವೀಕರಿಸಬೇಕು, ಪ್ರತಿಯೊಬ್ಬರೂ ಒಂದೊAದು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮರ್ ತಿಳಿಸಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ದೂರದೃಷ್ಟಿಯ `ಸಸ್ಯ ಶ್ಯಾಮಲ' ಯೋಜನೆಗೆ ಗಿಡನೆಟ್ಟು ಚಾಲನೆ ನೀಡಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ೨೦೨೩-೨೪ನೇ ಸಾಲಿನ ಬಜೆಟ್‌ನಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದಲ್ಲಿ ೫೦ ಲಕ್ಷ ಸಸಿಗಳನ್ನು ನೆಡುವ `ಸಸ್ಯಶ್ಯಾಮಲ' ಕಾರ್ಯಕ್ರಮ ಘೋಷಿಸಿರುವ ಹಿನ್ನಲೆಯಲ್ಲಿ ಅದಕ್ಕೆ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳ ಆವರಣದಲ್ಲಿ ತಲಾ ೫೦ ಗಿಡಗಳನ್ನು ನೆಡುವ ಉದ್ದೇಶವಿದ್ದು, ವಿದ್ಯಾರ್ಥಿಗಳು ಸಹಕಾರ ನೀಡಬೇಕು, ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು, ಇದರಿಂದ ಉತ್ತಮ ಗಾಳಿ ಸಿಗುವುದರಿಂದ ರೋಗಮುಕ್ತ ಸಮಾಜ ಸಾಧ್ಯವಾಗುತ್ತದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ಬಿ.ರಮೇಶ್ ಮಾತನಾಡಿ, ವಸತಿ, ಕೈಗಾರಿಕೆ, ಅಣೆಕಟ್ಟುಗಳ ನಿರ್ಮಾಣದಿಂದ ಕಾಡು ನಾಶವಾಗಿದೆ, ಒಂದು ರಾಷ್ಟçದ ಅಭಿವೃದ್ದಿಗೆ ಪೂರಕವಾಗಿ ಇರಬೇಕಾದಷ್ಟು ಪ್ರಮಾಣದಲ್ಲಿ ಇಂದು ಅರಣ್ಯ ಇಲ್ಲವಾಗಿದೆ, ಇದರಿಂದ ಪರಿಸರದಲ್ಲಿ ತಾಪಮಾನ ಏರಿಕೆಯಿಂದಾಗಿ ಅನೇಕ ಸಮಸ್ಯೆಗಳು ಎದುರಾಗುವ ಆತಂಕವೂ ಇದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಸಸ್ಯಶ್ಯಾಮಲ ಯೋಜನೆ ಅತ್ಯಂತ ದೂರದೃಷ್ಟಿಯಿಂದ ಸರ್ಕಾರ ಘೋಷಿಸಿದೆ, ಭವಿಷ್ಯದ ಪ್ರಜೆಗಳಾದ ಶಾಲಾ ಮಕ್ಕಳು ಇದನ್ನು ಅನುಷ್ಟಾನಗೊಳಿಸುವ ಹೊಣೆ ಹೊಂದಿದ್ದಾರೆ, ಪ್ರತಿಯೊಬ್ಬರೂ ಒಂದೊAದು ಗಿಡ ನೆಟ್ಟು ಬೆಳೆಸಿದರೆ ಅದು ಶಾಶ್ವತವಾಗಿದ್ದು, ನೀವು ಶಾಲೆಬಿಟ್ಟು ಹೋದರೂ ನಿಮ್ಮ ನೆನಪು ಇಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ಬಿಇಒ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಯೂ ಆಗಿರುವ ಕನ್ನಯ್ಯ ಮಾತನಾಡಿ, ಗಿಡಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರದಾಗಲಿ ಎಂದ ಅವರು, ಪ್ರಕೃತಿಯ ಜತೆ ನಾವು ಹೊಂದಿಕೊAಡು ಹೋಗಬೇಕೆ ಹೊರತೂ ಅದರ ವಿರುದ್ದ ಹೋದರೆ ಅದರಿಂದಾಗುವ ಹಾನಿಯನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿ, ಮಕ್ಕಳು ಪರಿಸರ ಜಾಗೃತಿಯನ್ನು ನಿಮ್ಮ ಮನೆ, ಶಾಲೆಯಿಂದಲೇ ಆರಂಭಿಸಿ ಎಂದರು.

ವಲಯ ಅರಣ್ಯಾಧಿಕಾರಿ ಶಿವಶಂಕರ್, ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಹೆಚ್.ಎಂ.ಮನೋಹರ್, ಶಾಲೆಯ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಇಸಿಒ ಕೆ.ಶ್ರೀನಿವಾಸ್, ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ಮುರಳಿ,ಎಸ್‌ಡಿಎಂಸಿ ಅಧ್ಯಕ್ಷ ವೆಂಕಟಾಚಲಪತಿ, ಮಾಜಿ ಅಧ್ಯಕ್ಷ ಎ.ಮಹೇಂದ್ರ, ಮುಖಂಡರಾದ ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ, ಪುನೀತ್, ನವೀನ್, ನರೇಂದ್ರ, ಶಾಲೆಯ ಶಿಕ್ಷಕರಾದ ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು ರಮಾದೇವಿ, ಚಂದ್ರಶೇಖರ್ ಮತ್ತಿತರರಿದ್ದರು.

ಚಿತ್ರ ೧೧. ಕೆ.ಎಲ್.ಆರ್. ೦೫ : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಸ್ಯಶ್ಯಾಮಲ ಯೋಜನೆಯ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಚಾಲನೆ ನೀಡಿದರು.