ನ್ಯೂಸ್

ಶಾಲಾ ಕೊಠಡಿಯಾಗಲಿದೆ ಕೆಎಸ್ಸಾಟಿರ್ಸಿ ಬಸ್​

ಕಲಾವಿದನ ಮನವಿಗೆ ಒಪ್ಪಿದ ಎಂಡಿ:

ಕೆಎಸ್ಸಾಟಿರ್ಸಿಯಲ್ಲಿ 7 ಲಕ್ಷಕ್ಕಿಂತ ಹೆಚ್ಚಿನ ಕಿ.ಮೀ. ಬಸ್​ ಸಂಚರಿಸಿದರೆ ಅದನ್ನು ಗುಜರಿಗೆ ಸೇರಿಸಲಾಗುತ್ತದೆ. ಅಂತಹ ನೂರಾರು ಬಸ್​ಗಳು ಕೆಎಸ್ಸಾಟಿರ್ಸಿ ಬಳಿಯಿದ್ದು, ಅವುಗಳನ್ನು ಗುಜರಿ ಹಾಕಲಾಗುತ್ತದೆ. ಆದರೆ, ಆ ಗುಜರಿ ಬಸ್​ಗಳನ್ನು ಮರುಬಳಕೆ ಮಾಡಲು ಕೆಎಸ್ಸಾಟಿರ್ಸಿ ಚಿಂತಿಸುತ್ತಿದೆ. ಅದರಂತೆ ಕಳೆದ ಕೆಲದಿನಗಳ ಹಿಂದೆ ಹಳೆಯ ಬಸ್​ ಅನ್ನು ಶೌಚಗೃಹವನ್ನಾಗಿ ಪರಿವತಿರ್ಸಿ ಮೆಜೆಸ್ಟಿಕ್​ನಲ್ಲಿ ಇಡಲಾಗಿದೆ. ಅದರ ಜತೆಗೆ ಇದೀಗ ಬಸ್​ ಅನ್ನು ಶಾಲಾ ಕೊಠಡಿಯನ್ನಾಗಿ ಪರಿವತಿರ್ಸುವ ಬಗ್ಗೆಯೂ ಚಿಂತಿಸಿದೆ.

ಬೆಂಗಳೂರು: ಗುಜರಿಗೆ ಸೇರುವ ಬಸ್​ಗಳ ಪುನರ್​ಬಳಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವ, ಕೆಎಸ್ಸಾಟಿರ್ಸಿ ಇದೀಗ ಹಳೆ ಬಸ್ಸನ್ನು ಶಾಲೆ ತರಗತಿಯನ್ನಾಗಿ ಪರಿವತಿರ್ಸಲು ಕುಂದಾಪುರದ ಬಗ್ವಾಡಿ ಗ್ರಾಮಸ್ಥರಿಗೆ ನೆರವು ನೀಡುತ್ತಿದೆ.

ಕುಂದಾಪುರದ ಬಗ್ವಾಡಿಯಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲವಾಗಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಉಪಮುಖ್ಯಮಂತ್ರಿ ಲಕ್ಷ$್ಮಣ ಸವದಿ ಅವರಲ್ಲಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕಲಾವಿದ ಮತ್ತು ಗ್ರಾಮದ ನಿವಾಸಿ ಪ್ರಶಾಂತ್​ ಆಚಾರ್​ ಕೆಎಸ್ಸಾಟಿರ್ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಲ್ಲಿ ಕೋರಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಶಿವಯೋಗಿ ಸಿ.ಕಳಸದ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಅದರ ಜತೆಗೆ ಕೆಎಸ್ಸಾಟಿರ್ಸಿಯ ಬಸ್​ ಅನ್ನು ಶಾಲಾ ಕೊಠಡಿಯನ್ನಾಗಿ ಪರಿವತಿರ್ಸಲು ಮುಂದಾಗಿ ಎಂದು ತಿಳಿಸಿದ್ದಾರೆ. ಅದಕ್ಕಾಗಿ ಕೆಎಸ್ಸಾಟಿರ್ಸಿಯಿಂದ ಹಳೆಯ ಬಸ್​ ಅನ್ನು ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತಿಥಿಗಳಿಗೆ ಚೋಟಾ ಬಸ್​:

ಕಲಾವಿದ ಪ್ರಶಾಂತ್​ ಆಚಾರ್​, ಲಾಕ್​ಡೌನ್​ ಅವಧಿಯಲ್ಲಿ ಕೆಎಸ್ಸಾಟಿರ್ಸಿಯ ಸಾಮಾನ್ಯ ಸಾರಿಗೆ ಮತ್ತು ಐರಾವತ ಬಸ್​ಗಳ ಮಾದರಿಯನ್ನು ಸಿದ್ಧಪಡಿಸಿದ್ದು, ಅದರ ವೀಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಅದು ಕೆಎಸ್ಸಾಟಿರ್ಸಿ ಎಂಡಿ ಶಿವಯೋಗಿ ಸಿ.ಕಳಸದ ಅವರ ಗಮನಕ್ಕೆ ಬಂದಿದ್ದು, ಸೋಮವಾರ ಪ್ರಶಾಂತ್​ ಆಚಾರ್​ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕರೆಸಿ, ಬಸ್​ ಮಾದರಿಯನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಕೆಎಸ್ಸಾಟಿರ್ಸಿಗೆ ಬರುವ ಅತಿಥಿಗಳಿಗೆ ಈ ಚೋಟಾ ಬಸ್​ ನೀಡಲು ಐರಾವತ ಬಸ್​ನ 10 ಮಾದರಿಯನ್ನು ಸಿದ್ಧಪಡಿಸಿ ನೀಡುವಂತೆ ಪ್ರಶಾಂತ್​ ಆಚಾರ್​ ಅವರಿಗೆ ಸೂಚಿಸಿದ್ದಾರೆ. ಅದಕ್ಕೆ ಬದಲಾಗಿ ಪ್ರತಿ ಮಾದರಿಗೆ 8 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ.

ಪ್ರಶಾಂತ್​ ಆಚಾರ್​, ಕಲಾವಿದ

ಲಾಕ್​ಡೌನ್​ ಅವಧಿಯಲ್ಲಿ ಕೆಎಸ್ಸಾಟಿರ್ಸಿ ಬಸ್​ ಮಾದರಿಯನ್ನು ಸಿದ್ಧಪಡಿಸಿ, ಅದರ ವೀಡಿಯೋವನ್ನು ಯೂಟ್ಯೂಬ್​ನಲ್ಲಿ ಹಾಕಿದ್ದೆ. ಅದನ್ನು ನೋಡಿ ಇದೀಗ ನಿಗಮದ ಎಂಡಿ ಅದೇ ಮಾದರಿಯ ಬಸ್​ಗಳನ್ನು ನೀಡುವಂತೆ ತಿಳಿಸಿದ್ದಾರೆ. ಅದರ ಜತೆಗೆ ಬಗ್ವಾಡಿಯಲ್ಲಿ ಶಾಲಾ ಕೊಠಡಿಗಾಗಿ ಹಳೆಯ ಬಸ್​ ಒಂದನ್ನು ಕೊಡುವ ಭರವಸೆ ನೀಡಿದ್ದಾರೆ.