ನಗರದ ಗ್ರಾಮಾಂತರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುವು ಬೇಡ ಎಂದು ವಿದ್ಯಾರ್ಥಿನಿ ಅನುಷಾ ಒತ್ತಾಯಿಸಿದ್ದಾರೆ.
ಗ್ರಾಮಾಂತರ ಬಸ್ ನಿಲ್ದಾಣ ಸರ್ಕಾರಿ ಅತಿಥಿಗೃಹ, ತಾಲೂಕು ಕಚೇರಿ, ಎಸ್‌ಪಿ ಕಚೇರಿ, ಪೊಲೀಸ್ ಕಮಿಷನರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮೃಗಾಲಯ, ಅರಮನೆ, ವಿಶ್ವವಿದ್ಯಾಲಯ, ದೇವರಾಜ ಮಾರುಕಟ್ಟೆ, ಜಗನ್ಮೋಹನ ಅರಮನೆ, ರೈಲು ನಿಲ್ದಾಣ ಸೇರಿದಂತೆ ವಿವಿಧ ಕಡೆ ತೆರಳಲು ಈಗಿರುವ ಬಸ್ ನಿಲ್ದಾಣ ಸೂಕ್ತವಾಗಿದೆ. ಹಲವು ಶಾಲೆ, ಕಾಲೇಜುಗಳಿಗೆ ಹತ್ತಿರದಲ್ಲಿದೆ. ಒಂದು ವೇಳೆ ಇದನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಿದಲ್ಲಿ ಈ ಎಲ್ಲ ಸ್ಥಳಗಳಿಗೂ ಹೋಗಿ ಬರುವುದು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಕಷ್ಟಕರವಾಗಲಿದೆ.