ವಿಜಯವಾಣಿ ಸುದ್ದಿಜಾಲ ಕೋಲಾರ
ಪರವಾನಿಗಿ, ಇನ್ಶೂರೆನ್ಸ್ ಇಲ್ಲದೆ ಹಾಗೂ ಮಕ್ಕಳ ಸುರಕ್ಷಾ ನಿಯಮಗಳು ಪಾಲಿಸದೆ ಕಳ್ಳಾಟವಾಡುತ್ತಿದ್ದ ಶಾಲಾ ಕಾಲೇಜು ವಾಹನಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೋಲಿಸ್ ಇಲಾಖೆ ಮುಂದಾಗಿದೆ.
ಕೋಲಾರ ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ಖಾಸಗಿ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ಮಕ್ಕಳನ್ನು ಆಕರ್ಷಿಸಲು ಗ್ರಾಮೀಣ ಭಾಗಕ್ಕೂ ಶಾಲಾ ಕಾಲೇಜುಗಳ ವತಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಕೆಲವೊಂದು ಶಾಲಾ ಕಾಲೇಜುಗಳು ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಪರವಾನಿಗೆ, ಇನ್ಶೂರೆನ್ಸ್ ಇಲ್ಲದೇ ಇರುವುದು. ಒಂದು ವಾಹನಕ್ಕೆ ಪರವಾನಗಿ ಪಡೆದು ಅದೇ ಪರವಾನಿಗೆಯಲ್ಲಿ ನಾಲ್ಕೆöÊದು ವಾಹನಗಳನ್ನು ಓಡಿಸುವುದು. ವಾಹನಕ್ಕೆ ಆರ್.ಟಿ.ಓ. ಅಧಿಕಾರಿಗಳು ನೀಡಿದ್ದ ಅವಧಿ ಮುಗಿದಿದ್ದರೂ, ಅವುಗಳನ್ನು ಹಾಗೆಯೇ ಓಡಿಸುವುದು. ಹಾಗೂ ಶಾಲಾ ಕಾಲೇಜುಗಳ ವಾಹನಗಳಲ್ಲಿ ಮಕ್ಕಳ ಸುರಕ್ಷತಾ ನಿಯಮಗಳು ಪಾಲನೆ ಮಾಡದೆ, ಕಳ್ಳಾಟವಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಮುಂದಾಗಿದೆ.
ಕಳೆದ ೨ ದಿನಗಳಿಂದ ನಗರದಾದ್ಯಂತ ಪೋಲಿಸರು ಶಾಲಾ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಶಾಲಾ ಕಾಲೇಜುಗಳಿಗೆ ತೆರಳಿ ಆವರಣಗಳಲ್ಲಿ ನಿಲ್ಲಿಸಿದ್ದ ವಾಹನಗಳ ದಾಖಲೆಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ರವರ ಆದೇಶದ ಮೇರೆಗೆ ಡಿ.ವೈ.ಎಸ್.ಪಿ. ನಾಗತಿ ನೇತೃತ್ವದಲ್ಲಿ ಗಲ್‌ಪೇಟೆ ಎ.ಎಸ್.ಐ. ಲೋಕೇಶ್ ಕುಮಾರ್, ನಗರಠಾಣೆ ಪಿ.ಐ. ಚಿದಾನಂದ್, ಸಂಚಾರಿ ಠಾಣೆ ಪಿ.ಎಸ್.ಐ. ಶ್ರೀನಿವಾಸಮೂರ್ತಿ, ವೃತ್ತ ನಿರೀಕ್ಷಕರ ಸಿಬ್ಬಂದಿ ವಾಸುದೇವ ಮೂರ್ತಿ, ಗಂಗಾಧರ, ಭೀಮಯ್ಯ ನೇತೃತ್ವದಲ್ಲಿ ಕಳೆದ ೨ ದಿನಗಳಿಂದ ನಗರದಲ್ಲಿ ಸಂಚರಿಸುತ್ತಿರುವ ಶಾಲಾ ಕಾಲೇಜು ಬಸ್ಸುಗಳನ್ನು ತಡೆದು ಚಾಲಕನ ಪರವಾನಗಿ, ವಾಹನ ಪರವಾನಿಗೆ, ಇನ್ಶೂರೆನ್ಸ್ ದಾಖಲೆಗಳ ಪರಿಶೀಲನೆ ಹಾಗೂ ಮಕ್ಕಳ ಸುರಕ್ಷಾ ಕ್ರಮಗಳನ್ನು ವಾಹನಗಳಲ್ಲಿ ಅಳವಡಿಸಿರುವ ಬಗ್ಗೆ ಪರಿಶೀಲಿಸಿ ನಿಯಮಗಳನ್ನು ಪಾಲಿಸದೇ ಇರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ.
ಇದಲ್ಲದೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಶಾಲೆಯ ಆಡಳಿತ ಮಂಡಳಿಯವರೊAದಿಗೆ ಚರ್ಚಿಸಿ, ಮಕ್ಕಳನ್ನು ವಾಹನಗಳಲ್ಲಿ ಹತ್ತಿಸಲು, ಇಳಿಸಲು ಪ್ರತಿ ಶಾಲಾ ವಾಹನಕ್ಕೆ ಸಹಾಯಕರೊಬ್ಬರನ್ನು ನಿಯಮಿಸಬೇಕು. ಹಾಗೂ ಶಾಲೆಯಿರುವ ಜಾಗದಲ್ಲಿ ವೇಗ ಮಿತಿ ಇತ್ಯಾದಿ ಚಿಹ್ನೆ ಇರುವ ಫಲಕಗಳನ್ನು ಪ್ರದರ್ಶಿಸಬೇಕು. ಮಕ್ಕಳ ಸುರಕ್ಷಾ ದೃಷ್ಠಿಯಿಂದ ಆಡಳಿತ ವರ್ಗವು ಆಗಾಗ ಪೋಷಕರೊಂದಿಗೆ ಸಭೆ ನಡೆಸಬೇಕು ಎಂಬ ಸಲಹೆಗಳನ್ನು ನೀಡುತ್ತಿದ್ದಾರೆ.
ಶಾಲಾ ವಾಹನವು ೪೦ ಕಿ.ಮೀ. ವೇಗ ಮೀರದಂತೆ ವೇಗ ನಿಯಂತ್ರಕ ಅಳವಡಿಸಬೇಕು. ಮಕ್ಕಳಿಗೆ ಅನುಗುಣವಾಗಿ ವಾಹನ ಸಾಮರ್ಥ್ಯ ಇರಬೇಕು. ವಾಹನದ ಒಳಗೆ ಮಕ್ಕಳು ನಿಲ್ಲದಂತೆ ಎಲ್ಲಾ ಮಕ್ಕಳಿಗೆ ಆಸನ ವ್ಯವಸ್ಥೆ ಕಡ್ಡಾಯ. ವಾಹನಗಳಿಗೆ ಚಾಲಕರನ್ನು ನೇಮಕ ಮಾಡುವಾಗ ಪೋಲಿಸ್ ಇಲಾಖೆಯಿಂದ ಅವರ ಗುಣ ಮತ್ತು ನಡತೆಯ ಪ್ರಮಾಣ ಪತ್ರವನ್ನು ಹೊಂದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ವಾಹನದಲ್ಲಿ ಮಕ್ಕಳ ಶಾಲಾ ಬ್ಯಾಗುಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಬೇಕು. ಎಲ್ಲಾ ವಾಹನಗಳಿಗೆ ಸಿ.ಸಿ. ಕ್ಯಾಮೆರಾ ಕಡ್ಡಾಯ ಮಾಡಬೇಕೆಂಬ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
ವಾಹನಗಳಿಗೆ ಫಿಟ್‌ನೆಸ್ ಕಡ್ಡಾಯ :
ಶಾಲಾ ವಾಹನಗಳಿಗೆ ನೋಂದಣಿ ಪ್ರಮಾಣ ಪತ್ರದ ಜೊತೆಗೆ ಫಿಟ್‌ನೆಸ್ ಸರ್ಟಿಫಿಕೇಟ್ ಕಡ್ಡಾಯ, ೧೫ ವರ್ಷ ಅವಧಿ ಮೀರದೆ ಇರುವ ವಾಹನಗಳನ್ನು ಮಾತ್ರ ಉಪಯೋಗಿಸಬೇಕು. ಆಗ್ಗಿಂದಾಗ್ಗೆ ವಾಹನದ ಸುಸ್ಥಿತಿಯ ಬಗ್ಗೆ ಪರಿಶೀಲಿಸಬೇಕು ಎಂದು ಶಾಲಾ ಕಾಲೇಜು ಆಡಳಿತ ಮಂಡಳಿಗೆ ಪೋಲಿಸರು ಸೂಚನೆ ನೀಡಿದ್ದಾರೆ.
ಆಟೋಗಳಿಗೆ ಕಡಿವಾಣ :
ಆಟೋಗಳಿಗೆ ೫ ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗಳಿಗೆ ಕರೆತರುತ್ತಿದ್ದಾರೆ. ಎಲ್.ಪಿ.ಜಿ. ಹೊಂದಿರುವ ಆಟೋಗಳಲ್ಲಿ ಇಂಜಿನ್ ಮೇಲೆ ಮಕ್ಕಳನ್ನು ಕೂರಿಸಿ ಕರೆತರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಆಟೋಗಳ ಸುಸ್ಥಿತಿಯ ಬಗ್ಗೆ ಪರಿಶೀಲಿಸಬೇಕು ಎಂದು ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
ಚಿತ್ರ ೧೯ ಕೆ.ಎಲ್.ಆರ್. ೦೩ : ಗಲ್‌ಪೇಟೆ ಠಾಣೆಯ ಪಿ.ಎಸ್.ಐ. ಲೋಕೇಶ್ ಕುಮಾರ್ ಹಾಗೂ ನಗರ ಠಾಣೆಯ ಪಿ.ಐ. ಚಿದಾನಂದ ಮತ್ತು ವೃತ್ತ ನಿರೀಕ್ಷಕರ ಸಿಬ್ಬಂದಿ ವಾಸುದೇವ ಮೂರ್ತಿ ಮತ್ತು ಭೀಮಣ್ಣ ಇವರು ನಗರದ ಆರ್.ವಿ. ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಚಾಲಕರಿಗೆ ಅರಿವು ಮೂಡಿಸುತ್ತಿರುವುದು.