ಶೃಂಗೇರಿ ಶಾರದಾ ಪಿಎಸಿಎಸ್ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿಶಾಲಾಕ್ಷಿ, ಸುಜಾತಾ, ಸುರೇಶ್ ಇತರರಿದ್ದರು. 
ನ್ಯೂಸ್

ಶಾರದಾ ಪಿಎಸಿಎಸ್‌ಗೆ 7.81 ಲಕ್ಷ ರೂ. ಲಾಭ

ಶೃಂಗೇರಿ: ಪಟ್ಟಣದ ಶಾರದಾ ಕೃಷಿ ಪತ್ತಿನ ಸಹಕಾರ ಸಂಘ 7.81 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್.ಸಿ.ವೆಂಕಟೇಶ್ ಹೇಳಿದರು.

ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ದರ್ಜೆ ಪಡೆಯುತ್ತಿದ್ದು 1621 ಷೇರುದಾರರಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಬೆಳೆ ಸಾಲ ಪಡೆದ ರೈತರು ಮೃತಪಟ್ಟಲ್ಲಿ ಮರಣೋತ್ತರ ನಿಧಿಯಾಗಿ 5 ಸಾವಿರ ರೂ. ನೀಡಲಾಗುತ್ತಿದೆ. ಧರೆಕೊಪ್ಪ ಗ್ರಾಪಂ ಹೊಳೆಕೊಪ್ಪದಲ್ಲಿ ಸಂಘದ ಶಾಖೆ ಇದ್ದು ಅದರಲ್ಲಿ ರಸಗೊಬ್ಬರ, ಮುಳ್ಳು ತಂತಿ ಸಹಿತ ಕೃಷಿ ಉಪಕರಣಗಳು ಲಭ್ಯವಿವೆ. ಅಡಕೆ, ಕಾಫಿ ದಾಸ್ತಾನು ಮಾಡಲು ಸಂಘದ ಗೋದಾಮು ಲಭ್ಯವಿದ್ದು ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಘದ ಉಪಾಧ್ಯಕ್ಷ ಶೃಂಗೇರಿ ಸುಬ್ಬಣ್ಣ, ನಿರ್ದೇಶಕರಾದ ಚೇತನ್ ಹೆಗ್ಡೆ, ಶಿವಮೂರ್ತಿ, ನರೇಂದ್ರ ಹೆಗ್ಡೆ, ಭಾನುಪ್ರಕಾಶ್, ಸುಜಾತಾ, ವಿಶಾಲಾಕ್ಷಿ, ಮೋಹನ್, ಸಿಇಒ ಸುರೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ದೀಪಕ್ ಇತರರಿದ್ದರು.