ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿತರೆಯೆಡೆಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಪಿಡಿಒ ಸರ್ವಮಂಗಳಾ, ಗ್ರಾಪಂ ಅಧ್ಯಕ್ಷೆ ಮಾಳವ್ವ ಕಟ್ಟೆಪ್ಪನವರ್, ಉಪಾಧ್ಯಕ್ಷೆ ಗಿರಿಜಾ ಸಿದ್ದರಡ್ಡಿ, ಸದಸ್ಯರಾದ ಬಸಮ್ಮ ವಾಲ್ಮೀಕಿ, ಫರಿದಾಬೇಗಂ ಬೆಟಗೇರಿ, ಮಲ್ಲಪ್ಪ ಜಂಬಣ್ಣವರ ಇದ್ದರು.  
ನ್ಯೂಸ್

ವೈಯಕ್ತಿಕ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿ, ಪಿಡಿಒ ಸರ್ವಮಂಗಳಾ ಮನವಿ

ಯಲಬುರ್ಗಾ: 2024-25ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಲು ರೈತರಿಂದ ಅರ್ಜಿ ಪಡೆಯಲಾಗುತ್ತಿದೆ ಎಂದು ಪಿಡಿಒ ಸರ್ವಮಂಗಳಾ ಹೇಳಿದರು.

ತಾಲೂಕಿನ ಸಂಗನಾಳದಲ್ಲಿ ಗ್ರಾಪಂನಿಂದ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ರಥಯಾತ್ರೆಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ರೈತರು ಜಮೀನುಗಳಲ್ಲಿ ಬದು, ಕೃಷಿ ಹೊಂಡ ನಿರ್ಮಾಣ, ಮೇಕೆ ಶೆಡ್, ನುಗ್ಗೆ, ತೆಂಗು ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು. ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಅನುಮೋದನೆಗೆ ಕಳಿಸಲಾಗುವುದು ಎಂದರು.

ಗ್ರಾಮದ ವಾರ್ಡ್‌ಗಳಲ್ಲಿ ರಥಯಾತ್ರೆ ಮೂಲಕ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ಬೇಡಿಕೆ ಪೆಟ್ಟಿಗೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಅರ್ಜಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಮಾಳವ್ವ ಕಟ್ಟೆಪ್ಪನವರ್, ಉಪಾಧ್ಯಕ್ಷೆ ಗಿರಿಜಾ ಸಿದ್ದರಡ್ಡಿ, ಸದಸ್ಯರಾದ ಬಸಮ್ಮ ವಾಲ್ಮೀಕಿ, ಫರಿದಾಬೇಗಂ ಬೆಟಗೇರಿ, ಮಲ್ಲಪ್ಪ ಜಂಬಣ್ಣವರ, ಈಶಪ್ಪ ಕೋಳೂರು, ಮಲ್ಲಪ್ಪ ಕಿನ್ನಾಳ, ದುರಗಪ್ಪ ನಡುಲಕೇರಿ, ಕರವಸೂಲಿಗಾರ ಶರಣಪ್ಪ, ಡಿಇಒ ಹನುಮರಡ್ಡಿ ಇತರರಿದ್ದರು.