ನ್ಯೂಸ್

ವೇಮಗಲ್-ಕುರುಗಲ್ ಪಟ್ಟಣಪಂಚಾಯ್ತಿಗೆ ಅಭ್ಯರ್ಥಿಗಳನ್ನು ಮತದಾರರೇ ಆಯ್ಕೆ ಮಾಡಬೇಕು / ಎಲ್ಲರೂ ಒಟ್ಟಿಗೆ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು / ಪಟ್ಟಣಪಂಚಾಯ್ತಿ ಕಾಂಗ್ರೇಸ್ ಹಿಡಿತಕ್ಕೆ ಬರಬೇಕು / ಶಾಸಕ ಕೊತ್ತೂರು ಮಂಜುನಾಥ್

ವಿಜಯವಾಣಿ ಸುದ್ದಿಜಾಲ ಕೋಲಾರ

ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ತಮ್ಮ ವಾರ್ಡ್ಗಳ ಅಭ್ಯರ್ಥಿಯ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇವೆ. ಆಯ್ಕೆಯನ್ನು ನೀವು ಮಾಡಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಗೆಲ್ಲಿಸುವ ಕೆಲಸ ಮಾಡೋಣ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಚುನಾವಣೆಗೆ ಸಂಬAಧಿಸಿದAತೆ ಶನಿವಾರ ವೇಮಗಲ್ ಹೋಬಳಿಯ ಬೆಟ್ಟಹೊಸೂರು ಗ್ರಾಮದಲ್ಲಿ ವಾರ್ಡ್ವಾರು ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಿಮ್ಮ ಭಾಗದಲ್ಲಿರುವ ಹಳ್ಳಿ, ಗ್ರಾಮ, ಪಟ್ಟಣಗಳು ಅಭಿವೃದ್ಧಿ ಆಗಬೇಕಂದರೆ ಈ ಚುನಾವಣೆ ಮಹತ್ವ ಪಡೆದಿದೆ. ಹಿಂದಿನ ಕಾಲದಲ್ಲಿ ಚುನಾವಣೆ ಬಂದರೆ ಗ್ರಾಮದಲ್ಲಿ ಹಿರಿಯರು ದೇವಾಲಯ, ಹಳ್ಳಿ ಕಟ್ಟೆ, ಎಲ್ಲೋ ಒಂದು ಭಾಗದಲ್ಲಿ ಕುಳಿತುಕೊಂಡು ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತಿದ್ದರು. ಆದರೆ ಇದೀಗ ರಾಜಕೀಯದಲ್ಲಿ ಅಂತಹ ಸನ್ನಿವೇಶಗಳು ಇಲ್ಲ. ಹಾಗಾಗಿ ನಮ್ಮ ಕಾಂಗ್ರೆಸ್ ಪಕ್ಷದಿಂದ ನಿಮ್ಮ ಗ್ರಾಮಕ್ಕೆ, ನಿಮ್ಮ ಮನಗೆ ಬಂದಿದ್ದೆವೆ. ನಿಮ್ಮ ಆಯ್ಕೆಯೇ ನಮ್ಮ ಆಯ್ಕೆಯಾಗಿದೆ ಎಂದರು.

ಪ್ರತಿಯೊAದು ಚುನಾವಣೆಯಲ್ಲಿ ಯಾರು ಅಭ್ಯರ್ಥಿ ಸೂಕ್ತ ಎಂದು ಮತದಾರರೇ ನಿರ್ಧಾರ ಮಾಡುತ್ತಾರೆ. ತಮ್ಮ ವಾರ್ಡ್ಗೆ ಬೇಕಾದ ಸೂಕ್ತ ಅಭ್ಯರ್ಥಿಯನ್ನು ತಾವೇ ಆಯ್ಕೆ ಮಾಡುವ ಉದ್ದೇಶದಿಂದ ೧೭ ವಾರ್ಡ್ಗಳಲ್ಲಿ ಸಂಚಾರ ಮಾಡುತ್ತಿದ್ದೆವೆ. ಅಭ್ಯರ್ಥಿಯನ್ನು ನೀವೇ ವಾರ್ಡ್ನಲ್ಲಿ ಕುಳಿತುಕೊಂಡು ನೀವೆ ಆಯ್ಕೆ ಮಾಡಿ, ನಿಮ್ಮ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿರುತ್ತೆವೆ ಎಂದರು.

ರಾಜಕೀಯ ತುಂಬಾ ಹದಗೆಟ್ಟಿದೆ, ವ್ಯಾಪಾರಗಳಾಗಿದೆ. ಅಭ್ಯರ್ಥಿ ಆಗುವವರು ಯಾರೇ ಆಗಲಿ ಪ್ರೀತಿಯಿಂದ ಜನರ ಮನಸ್ಸನ್ನು ಗೆಲ್ಲಬೇಕು. ಅನಿಟ್ಟಿನಲ್ಲಿ ಚುನಾವಣೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ವೇಮಗಲ್ ಕುರುಗಲ್ ಮೊದಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತರಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಶಾಸಕ ಕೊತ್ತೂರು ಮಂಜುನಾಥ್ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಇಲ್ಲಿ ಇನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಾಗಿರುವ ಹಿನ್ನಲೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ನೀಡಿ ನಡೆದುಕೊಂಡಿದೆ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳನ್ನು ಮುಟ್ಟದ ಮನೆಯಿಲ್ಲ ಎಂದರು.

ವೇಮಗಲ್ ನಿಂದ ಸೀತಿ ವರೆಗೆ ೮ ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಆಗಿದೆ. ಅದಷ್ಟು ಬೇಗ ಎಲ್ಲಾ ಕಾಮಗಾರಿಗಳಿಗೂ ಕಾರ್ಯರೂಪಕ್ಕೆ ಬರಲಿದೆ. ಅದೇ ರೀತಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದರು.

ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಬಹಳ ಕಾಲದ ಅಪೇಕ್ಷೆಯಿಂದ ಈ ಭಾಗದ ಗ್ರಾಮಗಳು ವೇಮಗಲ್‌ಗೆ ಸೇರಿಸಲಾಗಿದೆ. ಈಗಾಗಲೇ ಬಹು ದೊಡ್ಡ ಪ್ರಮಾಣದಲ್ಲಿ ರಸ್ತೆ ಆಗಲಿದೆ. ಈಗಾಗಲೇ ವೇಮಗಲ್ ಕುರುಗಲ್ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ತಮ್ಮ ಮುಂದೆಯೇ ಕಾಣುತ್ತಿದೆ.

ಗೌರವಯುತವಾಗಿ ಜನರು ಬದುಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಸರ್ಕಾರ ಜನರ ಮನ ಗೆದ್ದಿದೆ. ತಮ್ಮ ವಾರ್ಡ್ಗಳಲ್ಲಿರುವ ಅಭ್ಯರ್ಥಿಗಳು ಈ ತಿಂಗಳ ೨೮ ರ ತನಕ ಶಾಸಕರ ಬಳಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಆಕಾಂಕ್ಷೆಗಳು ಏನೆಲ್ಲ ದಾಖಲೆಗಳು ಬೇಕು. ಅವುಗಳನ್ನು ಸಿದ್ದತೆಗೊಳಿಸಿಕೊಳ್ಳಬೇಕು. ತಮ್ಮ ತಮ್ಮ ವಾರ್ಡ್ಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆಗಲಿ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ, ಪಕ್ಷದ ಪರ ಕೆಲಸ ಮಾಡಬೇಕು ಎಂದು ಆಕಾಂಕ್ಷಿಗಳಿಗೆ ತಿಳಿಸಿದರು.

ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲಗೌಡ, ಉದಯ್ ಶಂಕರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಬೆಟ್ಟಹೊಸಪುರ ಜಗನ್ನಾಥ್, ಕಲ್ವ ಶ್ರೀರಾಮಪ್ಪ, ಮೈಲಾಂಡಹಳ್ಳಿ ಮುರಳಿ, ಪುರಹಳ್ಳಿ ಗಣೇಶ್, ನಂಜುAಡಪ್ಪ, ಕುರುಬರಹಳ್ಳಿ ಮೂರ್ತಿ, ಪಿಳ್ಳಪ್ಪ, ಪೈನಾನ್ಸ್ ರಾಜಣ್ಣ, ಬಾಬಣ್ಣ, ವೆಂಕಟೇಶ್ ಗೌಡ, ಮೇಡಿಹಾಳ ಮುನಿಆಂಜಿನಪ್ಪ, ಬೀಮಣ್ಣನವರ ಮಂಜುನಾಥ್, ಸಿಎಂಎA ಮಂಜುನಾಥ್, ವೀರೇಂದ್ರ ಪಾಟೀಲ್, ಮುಂತಾದವರು ಇದ್ದರು.

ಚಿತ್ರ ೧೯ ಕೆ.ಎಲ್.ಆರ್. ೦೨ : ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆಗೆ ವಾರ್ಡ್ವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಕ್ಕಲೇರಿ ಹೋಬಳಿ ಬೆಟ್ಟಹೊಸೂರು ಗ್ರಾಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಕಾರ್ಯಕರ್ತರ ಸಭೆ ನಡೆಸಿದರು. ಎಂ.ಎಲ್.ಸಿ.ಅನಿಲ್‌ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಇತರರು ಉಪಸ್ಥಿತರಿದ್ದರು.