ನ್ಯೂಸ್

ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆ ಕಾಂಗ್ರೆಸ್ ಪ್ರಚಾರ ಸಭೆ/

ಬಿಜೆಪಿ-ಜೆಡಿಎಸ್ ಕೇವಲ ಆದೇಶಕ್ಕೆ ಮಾತ್ರ ಸೀಮಿತ/ ಕಾಂಗ್ರೆಸ್ ಸರ್ಕಾರದಿಂದ ಅಭಿವೃಧ್ಧಿ/ ಮೈತ್ರಿ ವಿರುದ್ದ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ,

ವಿಜಯವಾಣಿ ಸುದ್ದಿಜಾಲ ವೇಮಗಲ್

ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಅನುದಾನ ಬಿಡುಗಡೆ ಮಾಡಿ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಮೈತ್ರಿ ಪಕ್ಷಗಳು ಯಾವ ಕೊಡುಗೆಗಳ ಮಾನದಂಡಗಳ ಮೇಲೆ ಹೋಗಿ ಮತ ಕೇಳತ್ತಾರೆ. ಜನತೆ ಪ್ರಶ್ನೆ ಮಾಡಬೇಕಾಗಿದೆ. ಸುಳ್ಳೆ ಮೈತ್ರಿಯ ಮಾನದಂಡ ಎಂದು ಶಾಸಕ ಕೊತ್ತೂರು ಮಂಜುನಾಥ್ ಮೈತ್ರಿ ವಿರುದ್ದ ವಾಗ್ದಾಳಿ ನಡೆಸಿದರು,

ತಾಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿಯ ಚುನಾವಣೆಗೆ ಸಂಬAಧಿಸಿದAತೆ ಬುಧವಾರ ಕೆಲವು ವಾರ್ಡಗಳ್ಲಿ ಹಮ್ಮಿಕೂಂಡಿದ್ದ ಪ್ರಚಾರದ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿ ಸುಳ್ಳು ಪಳ್ಳು ಹೇಳಿ ನಿಮ್ಮ ಮುಂದೆ ಕಾಂಗ್ರೆಸ್ ಪಕ್ಷದವರು ಬಂದಿಲ್ಲ. ಚುನಾವಣೆಗೆ ಪೂರ್ವದಲ್ಲಿ ಏನು ಹೇಳಿದ್ದೇವೆ ಅದನ್ನು ಜಾರಿ ಮಾಡಿದ್ದೇವೆ. ಸ್ವಾತಂತ್ರ‍್ಯ ಪೂರ್ವದಿಂದ ಇಲ್ಲಿ ತನಕ ಕಾಂಗ್ರೆಸ್ ದೇಶಕ್ಕಾಗಿ ಸಾಕಷ್ಟು ಕೊಡುಗೆ ಕೊಟ್ಟಿದೆ. ಬಿಜೆಪಿ ಜೆಡಿಎಸ್ ದೇಶಕ್ಕಾಗಿ ಏನು ಕೊಡುಗೆ ಕೊಟ್ಟಿದೆ ಕೇಳಿ ಮೈತ್ರಿಯಿಂದ ಏನೂ ಮಾಡಕ್ಕೆ ಆಗಲ್ಲ. ಕಾಂಗ್ರೆಸ್ ಮಾತ್ರವೇ ಅಭಿವೃದ್ಧಿ ಮಾಡೋದು ನಿಮ್ಮ ಮತಕ್ಕೆ ಬೆಲೆ ಕೊಡುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತದೆ ಎಂದರು.

ಬೆAಗಳೂರಿನ ಸಂಜಯ್ ನಗರದಲ್ಲಿ ಸ್ವಂತ ಮನೆ ಇದೆ ಅಂತ ಹೇಳಿಕೊಂಡಿದ್ದ ವರ್ತೂರು ಪ್ರಕಾಶ್.ಆದರೆ ಅವರ ಮನೆಯು ಬಾಡಿಗೆದ್ದಾಗಿದೆ. ಕಳೆದ ಐದು ವರ್ಷದಿಂದ ಬಾಡಿಗೆ ಕೊಟ್ಟಿಲ್ಲ ಅಂತ ಮನೆ ಮಾಲೀಕರ ಪೋಲಿಸ್ ದೂರು ಕೊಟ್ಟಿದ್ದಾರೆ. ದಾಖಲೆಗಳ ಸಮೇತ ಇದೆ. ಇವತ್ತು ಅವರನ್ನು ಕೋರ್ಟ್ ಮೂಲಕ ಮನೆಯಿಂದ ಹೊರ ಹಾಕುವ ಪರಿಸ್ಥಿತಿ ಬಂದಿದೆ. ಇದು ಅವರ ಸಾಧನೆ ಜನ ಯೋಚನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಕ್ಷೇತ್ರದಲ್ಲಿ ಸುಳ್ಳಿಗೆ ಇನ್ನೊಂದು ಹೆಸರು ವರ್ತೂರು ಪ್ರಕಾಶ್. ೨೦೧೩ ರಿಂದ ೨೦೧೮ ರವರೆಗೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮಾಡಿಸಿದ್ದು. ಅದನ್ನೇ ಇವತ್ತು ಎಲ್ಲಾ ಕಡೆಯಲ್ಲಿ ಹೇಳಿಕೊಂಡು ನಾನು ಅಭಿವೃದ್ಧಿ ಮಾಡಿದಷ್ಟು ಬೇರೆ ಯಾವ ಶಾಸಕರು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹೌದಪ್ಪ ವರ್ತೂರು ಪ್ರಕಾಶ ಅವರೇ ಹಿಂದೆ ಶಾಸಕರಾಗಿದ್ದ ಬೈರೇಗೌಡರು, ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್ ಅವರು ಹಳ್ಳಿಗಳಲ್ಲಿ ಯುವಕರನ್ನು ರಾತ್ರಿಯಲ್ಲಿ ಗುಂಡು ತುಂಡು ಕೊಟ್ಟು ಹಾಳು ಮಾಡಿಲ್ಲ. ಜಾತಿ ಜಾತಿಗಳ ಮಧ್ಯೆ ಸಂಘರ್ಷ ಮಾಡಿಲ್ಲಪ್ಪ ಎಂದು ವರ್ತೂರು ಪ್ರಕಾಶ್ ವಿರುದ್ದ ವಾಗ್ದಾಳಿ ನಡೆಸಿದರು.

ವರ್ತೂರು ಪ್ರಕಾಶ್ ಅವರು ಶಾಸಕರಾಗಿ ಸಚಿವರಾಗಿ ಕ್ಷೇತ್ರದಲ್ಲಿ ಏನಾದರೂ ಒಂದೇ ಒಂದು ಹೈಸ್ಕೂಲ್, ಐಟಿಐ, ಡಿಪ್ಲೊಮಾ, ಪಿಯುಸಿ, ಡಿಗ್ರಿ ಕಾಲೇಜು ಮಾಡಿದ್ದಿರಾ ಬಹಿರಂಗ ಪಡಿಸಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಹೈಸ್ಕೂಲ್, ಅಂಗನವಾಡಿ ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾಡಿದ್ದಾರೆ. ವರ್ತೂರು ಪ್ರಕಾಶ್ ಅವರನ್ನು ಕಳೆದ ಎರಡು ಚುನಾವಣೆಗಳಲ್ಲಿ ಮೂರನೇ ಸ್ಥಾನಕ್ಕೆ ಕ್ಷೇತ್ರದ ಜನತೆ ಕಳಸಿದ್ದಾರೆ. ಅದರೂ ಬುದ್ದಿ ಕಲಿಯಲಿಲ್ಲ ಸುಳ್ಳೇ ಬಂಡವಾಳ ಮಾಡಿಕೊಂಡಿದ್ದಾರೆ ಅವರಿಗೆ ಈ ಚುನಾವಣೆಯಲ್ಲಿ ಸಹ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಕಳೆದ ಕೋಮುಲ್ ಚುನಾವಣೆಯಲ್ಲಿ ವೇಮಗಲ್ ಭಾಗದ ಮೈತ್ರಿ ಅಭ್ಯರ್ಥಿ ಜನಘಟ್ಟ ಕೃಷ್ಣಪ್ಪ ಅವರ ಪರವಾಗಿ ವರ್ತೂರು ಪ್ರಕಾಶ್ ಮತ್ತು ಸಿಎಂಆರ್ ಶ್ರೀನಾಥ್ ಅವರು ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದ ಹಣವನ್ನು ಸೋತ ನಂತರ ವಸೂಲಿ ಮಾಡಿದ್ದಾರೆ. ಅಂತಹ ಮೈತ್ರಿ ಗಿರಾಕಿಗಳ ಬಗ್ಗೆ ಹೆಚ್ಚು ಮಾತು ಅವಶ್ಯಕತೆ ಇಲ್ಲ ಅವರ ಸುಳ್ಳು ಈ ಭಾಗದಲ್ಲಿ ನಡೆಯಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ. ಆರ್ ಸುದರ್ಶನ್, ಮಾಜಿ ಜಿಪಂ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಉದಯ ಶಂಕರ್, ಪೆರ್ಜೇನಹಳ್ಳಿ ನಾಗೇಶ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಯಲವಾರ ರಾಜಕುಮಾರ್, ಆಫ್ರೀದ್, ಛತ್ರಕೋಡಿಹಳ್ಳಿ ಮಂಜುನಾಥ್, ಅಭ್ಯರ್ಥಿಗಳಾದ ಗಂಗಣ್ಣ, ಅಂಜಲಿ ಪ್ರಕಾಶ್, ಕೆ.ಹೆಚ್ ಮುನಿರಾಜು, ರಾಜೇಶ್, ಮಂಜುಳ ಸುರೇಶ್, ಮುರಳಿ, ದೀಪಾ, ವನಿತಾ ಮಹೇಶ್, ಶಶಿಕಲಾ ನಾಗೇಶ್, ರವಿಚಂದ್ರ, ಇದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೧ ತಾಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿಯ ಚುನಾವಣೆಗೆ ಸಂಬAಧಿಸಿದAತೆ ಬುಧವಾರ ಕೆಲವು ವಾರ್ಡಗಳ್ಲಿ ಹಮ್ಮಿಕೂಂಡಿದ್ದ ಪ್ರಚಾರದ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮುಂತಾದವರಿದ್ದರು.