ಕೋಲಾರದ ಸ್ಕೌಟ್ಸ್​ ಗೈಡ್ಸ್​ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಸ್ಕೌಟ್ಸ್​ ಆಯುಕ್ತ ಕೆ.ಆರ್​.ಸುರೇಶ್​ ಉದ್ಘಾಟಿಸಿದರು. ವಿ.ಬಾಬು, ಸವಿತಾ, ಮಲ್ಲಿಕಾರ್ಜುನ್​, ಸಾಗರ್​ ಇದ್ದರು. 
ನ್ಯೂಸ್

ವೃತ್ತಿ ಕೌಶಲ ತರಬೇತಿ ಪಡೆದುಕೊಳ್ಳಿ

ಕೋಲಾರ: ಯವಕರು ಪದವಿ ಜತೆಗೆ, ವೃತ್ತಿ ಕೌಶಲ ತರಬೇತಿ ಪಡೆದುಕೊಂಡಾಗ ಉದ್ಯೋಗದ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂದು ಸ್ಕೌಟ್ಸ್​ ಆಯುಕ್ತ ಕೆ.ಆರ್​.ಸುರೇಶ್​ ಹೇಳಿದರು.

ನಗರದ ಸ್ಕೌಟ್​ ಭವನದಲ್ಲಿ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​, ರೋಟರಿ ಕೋಲಾರ ನಂದಿನಿ ಮತ್ತು ಬೆಂಗಳೂರಿನ ನಂದಿ ಅಕಾಡೆಮಿ ವತಿಯಿಂದ ಗುರುವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ನಿರೀತ ಮಟ್ಟದಲ್ಲಿ ಸ್ಥಳಿಯರಿಗೆ ಯದ್ಯೋಗ ಸಿಕ್ಕಿಲ್ಲ ಎಂಬ ಕೊರಗಿದೆ. ಅದನ್ನು ನಿಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ನಿರುದ್ಯೋಗಸ್ಥರು ಸಂಘ&ಸಂಸ್ಥೆಗಳ ನೆರವು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು. ಕೋಲಾರ ಜಿಲ್ಲೆ ಕೈಗಾರಿಕಾ ಜಿಲ್ಲೆಯಾಗಿ ಪರಿವರ್ತನೆಯಾಗುತ್ತಿದ್ದು, ನಿರುದ್ಯೋಗಿ ಅಭ್ಯರ್ಥಿಗಳು ಇಂತಹದ್ದೇ ಕೆಲಸ ಬೇಕು ಎನ್ನದೇ ತಮಗೆ ಸಿಕ್ಕ ಕೆಲಸವನ್ನು ಶ್ರದ್ದಾ ಭಕ್ತಿಯಿಂದ ಮಾಡಬೇಕು ಎಂದು ಸಲಹೆ ನೀಡಿದರು.

ಯುವಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಹೆಚ್ಚು ನೈಪುಣ್ಯತೆಯನ್ನು ಹಾಗೂ ಅನುಭವ ಪಡೆಯುತ್ತಾ ಶ್ರಮಜೀವಿಗಳಾಗಿ ದುಡಿಮೆ ಮಾಡಿ ಎಂದು ತಿಳಿಸಿದರು.

ರೋಟರಿ 3191 ಜಿಲ್ಲಾ ಕಾರ್ಯದರ್ಶಿ ಎಸ್​.ವಿ.ಸುಧಾಕರ ಮಾತನಾಡಿ, ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂಬುದು ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ ಮತ್ತು ರೋಟರಿ ಸಂಸ್ಥೆಗಳ ಮೂಲ ಆಶಯ. ಇದಕ್ಕೆ ವಿವಿಧ ಸಂ&ಸಂಸ್ಥೆಗಳ ಸಹಕಾರ ಅಗತ್ಯ ಎಂದು ಹೇಳಿದರು.

ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡಲು ಸಂಸ್ಥೆಯಿಂದ ಯೋಜನೆ ರೂಪಿಸಿಕೊಳ್ಳಲಾಗಿದೆ. ಉದ್ಯೋಗ ಮೇಳ ಎಲ್ಲರ ಜೀವನದಲ್ಲಿ ಹೊಸತು ಕಾಣಬಹುದು. ಉದ್ಯೋಗ ದೊರೆತವರು ಸಮಯವನ್ನು ಕಂಪನಿಗಳು ನೀಡುವ ಕಾರ್ಯಕ್ಕೆ ಮೀಸಲಿಡಬೇಕು. ಆಗ ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಅವಕಾಶಗಳು ಹುಡುಕಕೊಂಡು ಬರಲು ಸಾಧ್ಯ ಎಂದರು.

ರೋಟರಿ ಜಿಲ್ಲಾ ನಿರ್ದೇಶಕರಾದ ರವಿಂದ್ರ, ರೋಟರಿ ಕೋಲಾರ ನಂದಿನಿ ಅಧ್ಯಕ್ಷ ಸ್ಕೌಟ್​ ಬಾಬು, ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಮಲ್ಲಿಕಾರ್ಜುನ್​, ಸಾಗರ್​, ಸವಿತಾ ಹಾಜರಿದ್ದರು.