ನ್ಯೂಸ್

ವೃತ್ತಕ್ಕೆ ಸಿದ್ದರಾಮಯ್ಯ ಹೆಸರು ಇಡಬೇಕು

ನಂಜನಗೂಡು-ಮೈಸೂರು ರಸ್ತೆಯ ಆರ್‌ಎಂಸಿ ಹತ್ತಿರದ ವೃತ್ತ ಅಥವಾ ಎಚ್.ಡಿ.ಕೋಟೆ-ಮೈಸೂರು ರಸ್ತೆಯ ಶ್ರೀರಾಂಪುರ ರಿಂಗ್ ರಸ್ತೆ ವೃತ್ತದಲ್ಲಿ ಯಾವುದಾದರೂ ಒಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಇಡಬೇಕು ಕಾಂಗ್ರೆಸ್ ಮುಖಂಡ ಮಲ್ಲೇಶ್ ಕೋಟೆ ಒತ್ತಾಯಿಸಿದರು. ಸಿದ್ದರಾಮಯ್ಯ ಶಾಸಕರಾಗಿದ್ದಾಗ ನಾಚನಹಳ್ಳಿ ಪಾಳ್ಯದ ಭೋವಿ ಸಮುದಾಯದಕ್ಕೆ ಬೆಂಬಲವಾಗಿ ನಿಂತು ಮನೆ, ನಿವೇಶನ ನೀಡಿದ್ದಾರೆ. ಸಮುದಾಯಕ್ಕೆ ನೆರವಾಗುತ್ತಿರುವ ಹಿನ್ನೆಲೆಯಲ್ಲಿ ಇವರ ಹೆಸರು ಇರಿಸಬೇಕೆಂಬುದು ಈ ಭಾಗದವರ ಬೇಡಿಕೆ ಆಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಮುಖಂಡರಾದ ಎಸ್.ಎ.ರಹೀಂ, ಕೇಶವಯ್ಯ, ಡಾ.ಆನಂದ್ ಇದ್ದರು.