ನ್ಯೂಸ್

ವೀರಶೈವಾಗಮ

ತದಾ ದದ್ಯಾದ್ ಗವಾದೀನಿ ದಾನಾನಿ ದಶ ಚಾದರಾತ್ | ಸಮಾಧಿಸ್ಥಾಪಿತಂ ಲಿಂಗಂ ಸವೃಷಂ ಪೂಜಯೇದಪಿ||

ಸಮಾಧಿಯ ಮೇಲೆ ಲಿಂಗವನ್ನು ಸ್ಥಾಪಿಸುವ ಸಂದರ್ಭದಲ್ಲಿ ಆಕಳು ಮೊದಲಾದ ಹತ್ತು ವಿಧವಾದ ದಾನಗಳನ್ನು ಗೌರವಪೂರ್ವಕವಾಗಿ ಕೊಡಬೇಕು. ಮತ್ತು ತದನಂತರ ಸಮಾಧಿಯ ಮೇಲೆ ಸ್ಥಾಪಿಸಿರುವ ವೃಷಭ ಸಹಿತ ಲಿಂಗವನ್ನು ಸಹ ಭಕ್ತಿಯಿಂದ ಪೂಜಿಸಬೇಕು. ಹತ್ತು ವಿಧವಾದ ದಾನಗಳಾವುವೆಂದರೆ- ಹಸು, ಭೂಮಿ, ಎಳ್ಳು, ಚಿನ್ನ, ತುಪ್ಪ, ಬಟ್ಟೆ, ದವಸ ಧಾನ್ಯಗಳು, ಬೆಳ್ಳಿ ಮತ್ತು ಉಪ್ಪು ಇವು ದಶವಿಧ ದಾನಗಳಲ್ಲಿ ಬರುತ್ತವೆ. ದಾನವು ಪುಣ್ಯಸಂಪಾದನೆಗೆ ಅತ್ಯುತ್ತಮವಾದ ಸಾಧನವಾಗಿದೆ. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ನೀಡಬೇಕು. ಮೇಲೆ ತಿಳಿಸಿದ ಹತ್ತು ಪ್ರಕಾರದ ದಾನಗಳನ್ನು ನೀಡಲು ಸಾಮರ್ಥ್ಯವಿದ್ದರೆ ಅವಶ್ಯವಾಗಿ ಮಾಡಬೇಕು. ಒಂದು ವೇಳೆ ಇಷ್ಟು ವ್ಯಾಪಕವಾದ ದಾನಗಳನ್ನು ಮಾಡಲು ಅಸಮರ್ಥನಾಗಿದ್ದರೆ ಎಷ್ಟು ಶಕ್ತಿ ಇರುತ್ತದೆಯೋ ಅಷ್ಟನ್ನು ಮಾತ್ರ ನಿಮೋಹಿಯಾಗಿ ದಾನ ಮಾಡಬೇಕು.

| ಮುಕುಟಾಗಮ (ಚರ್ಯಾಪಾದ -5. 4/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.