ನ್ಯೂಸ್

ವೀರಭದ್ರಸ್ವಾಮಿ ಮುದ್ದನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ

ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ವೀರಭದ್ರಸ್ವಾಮಿ ಹಾಗೂ ಮಾದೇಗೌಡ ಅವರನ್ನು ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದಿಸಿದರು. ಕಾರ್ಯದರ್ಶಿ ಶೇಖರ್, ಸದಸ್ಯರಾದ ಬೋರೇಗೌಡ, ಹರೀಶ್, ಮರಿಯಪ್ಪ, ಉಷಾರಾಣಿ, ಸ್ವಾಮಿ, ಉಮೇಶ್ ಮುಖಂಡರಾದ ಗೋವಿಂದರಾಜ್, ದಿನೇಶ್, ಮಹೇಶ್ ಮತ್ತಿತರರಿದ್ದರು.

ಪಿರಿಯಾಪಟ್ಟಣ: ತಾಲೂಕಿನ ಮುದ್ದನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ವೀರಭದ್ರಸ್ವಾಮಿ ಹಾಗೂ ಮಾದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


11 ಸದಸ್ಯರನ್ನು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಶನಿವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಿವಕುಮಾರ್ ಇಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.


ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೀರಭದ್ರಸ್ವಾಮಿ ಮಾತನಾಡಿ, ಸಹಕಾರ ಸಂಘದ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರು ಒಮ್ಮತದಿಂದ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು, ಅವರ ನಿರೀಕ್ಷೆಗೆ ಚ್ಯುತಿಯಾಗದಂತೆ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಸಹಕಾರ ಸಂಘದ ಕಾರ್ಯದರ್ಶಿ ಶೇಖರ್, ಸದಸ್ಯರಾದ ಬೋರೇಗೌಡ, ಹರೀಶ್, ಮರಿಯಪ್ಪ, ಉಷಾರಾಣಿ, ಸ್ವಾಮಿ, ಉಮೇಶ್ ಮುಖಂಡರಾದ ಗೋವಿಂದರಾಜ್, ದಿನೇಶ್, ಮಹೇಶ್, ಬೋರೇಗೌಡ, ಜವರೇಗೌಡ, ಎಂ.ಕೆ.ಮಾದೇಶ್, ದುಂಡಯ್ಯ , ಶಿವಣ್ಣ, ದೇವರಾಜ್, ಬಸವರಾಜ್, ಶಿವರಾಜ್ ಮತ್ತಿತರರು ಹಾಜರಿದ್ದರು.