ವಿ.ಎಸ್.ಎಸ್.ಎನ್ ವೀರದೇವಪುರ ನ್ಯಾಯಬೆಲೆ ಅಂಗಡಿ ಪ್ರಸ್ತುತ ಪರ್ಯಾಯ ವ್ಯವಸ್ಥೆ ಮುಖಾಂತರ ನಡೆಯುತ್ತಿರುವುದರಿಂದ ಈ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ವೀರದೇವನಪುರ, ವೀರೇಗೌಡನಹುಂಡಿ ಹಾಗೂ ಮಹದೇವನಹರ ಗ್ರಾಮದ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಪಡಿತರ ವಿತರಿಸಲು ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ ಸಂಸ್ಥೆಗಳು/ ಅಥವಾ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ , ಸ್ಥಳೀಯ ಸಂಸ್ಥೆಗಳು, ಸಂಘಗಳು(ಸಹಕಾರ ಸಂಘಗಳು ಮಾತ್ರ), ವ್ಯಕ್ತಿಗಳು( ಅಂಗವಿಕಲರಿಗೆ, ತೃತೀಯ ಲಿಂಗ ವ್ಯಕ್ತಿಗಳು) ಅರ್ಜಿ ಸಲ್ಲಿಸಲು ಅರ್ಹ ಇರುತ್ತಾರೆ.
ಸಂಘವು ಸಹಕಾರ ಸಂಘಗಳ ಕಾಯ್ದೆ-1959 ರಡಿ ಉಪನಿಬಂಧಕರಿoದ ಕಡ್ಡಾಯವಾಗಿ ನೊಂದಾಯಿತರಾಗಿರಬೇಕು, ಕ್ಡಾಯವಾಗಿ ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರಬೇಕು ಮತ್ತು ಮೂರು ವರ್ಷಗಳಿಂದ ಆಡಿಟ್ ವರದಿಗಳನ್ನು ಸಲ್ಲಿಸಬೇಕು, ಸಂಘದ ಅಧ್ಯಕ್ಷರು/ಕಾರ್ಯದರ್ಶಿ/ಅರ್ಜಿದಾರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಪ್ರಕರಣಗಳಾಗಲೀ ಮತ್ತು ಕ್ರಿಮಿನಲ್ ಪ್ರಕರಣಗಳಾಗಲೀ ಇಲ್ಲದಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಧೃಢೀಕರಣ ಸಲ್ಲಿಸಬೇಕು. ಉದ್ದೇಶಿತ ನ್ಯಾಯಬೆಲೆ ಅಂಗಡಿ ಕೇಂದ್ರದ ಗ್ರಾಮವು ಕಡ್ಡಾಯವಾಗಿ ಸಂಘದ ಕಾರ್ಯವ್ಯಾಪ್ತಿಯಲ್ಲಿರಬೇಕು. ಕಾರ್ಯವ್ಯಾಪ್ತಿ ಹೊಂದಿಲ್ಲದೆ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಸಂಘದ ಹೆಸರಿನಲ್ಲಿ ತೆರೆಯಲಾಗಿರುವ ಬ್ಯಾಂಕ್ ಖಾತೆಯಲ್ಲಿ ಕಳೆದ ಎರಡು ವರ್ಷಗಳಿಂದ ಕನಿಷ್ಠ 2 ಲಕ್ಷ ರೂ. ಗಳ ಮೊತ್ತವನ್ನು ನಿರಂತರವಾಗಿ ಹೊಂದಿರಬೇಕು. (2 ವರ್ಷಗಳ ಬ್ಯಾಂಕ್ ಸ್ಟೇಟ್ ಮೆಂಟ್ ಲಗತ್ತಿಸುವುದು.) ಅರ್ಜಿ ಸಲ್ಲಿಸುವ ಸಂಘಗಳು ನಿಗದಿತ ನಮೂನೆ 'ಎ' ಯಲ್ಲಿ ಪ್ರಾಧಿಕಾರ ಮಂಜೂರಾತಿ ಕೋರಿಕೆ ಅರ್ಜಿಯೊಂದಿಗೆ ಸಂಘದ ಕಾರ್ಯದರ್ಶಿಯ ಆಧಾರ್ ಸಂಖ್ಯೆ, ಸಂಘದ ನೋಂದಣಿ ಪ್ರಮಾಣ ಪತ್ರ, ಸಂಘದ ಬೈಲಾ ಮತ್ತು ಠರಾವು ಪ್ರತಿ, ಸಂಘದ ಸದಸ್ಯರ /ಪದಾಧಿಕಾರಿಗಳ ಪಟ್ಟಿ, ಕಾರ್ಯದರ್ಶಿಯ ಮೂರು ಭಾವಚಿತ್ರಗಳು, ವಿದ್ಯಾರ್ಹತೆ-ಹತ್ತನೇ ತರಗತಿ ಉತ್ತೀರ್ಣ (ಅಂಕಪಟ್ಟಿ ಲಗತ್ತಿಸುವುದು) ಹಾಗೂ ಇತರೆ ed ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.