ನ್ಯೂಸ್

ವಿಸ್ಟ್ರಾನ್ ಘಟನೆ ನಿಷ್ಪಕ್ಷಪಾತ ತನಿಖೆಗೆ ಪಟ್ಟು

ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಭೀಮಸೇನೆ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ,ಜೆಎಂಎಸ್ ರಾಜ್ಯ ಉಪಾಧ್ಯಕ್ಷೆ ವಿ.ಗೀತಾ, ದಸಂಸ ಮುಖಂಡರಾದ ವಕ್ಕಲೇರಿ ರಾಜಪ್ಪ,ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿಜಯಕೃಷ್ಣ, ಪಿ.ಶ್ರೀನಿವಾಸ್, ತಂಗರಾಜ್, ಸುಶೀಲಾ, ಆಶಾ,ಮುನಿವೆಂಕಟಪ್ಪ, ವಿ.ಅಂಬರೀಶ್, ನಾಗೇಶ್, ಕೆ. ವಾಸುದೇವರೆಡ್ಡಿ, ಶಿವಪ್ಪ, ಬೀರಾಜು, ವಿಜಯಕುಮಾರಿ, ಅಂಕಿತಾ, ಭೀಮರಾಜ್ ಇತರರಿದ್ದರು.

ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ವಿಸ್ಟ್ರಾನ್ ಕಂಪನಿಯನ್ನು ಶೀಘ್ರವಾಗಿ ಪುನರ್ ಆರಂಭಿಸಿ ಈಗಾಗಲೇ ದುಡಿಯುತ್ತಿದ್ದ ಕಾರ್ಮಿಕರನ್ನು ಮರು ನೇಮಿಸಿಕೊಂಡು ಸೇವೆ ಕಾಯಂ ಮಾಡಬೇಕು, ಕಾರ್ಮಿಕರಿಗೆ ಬಾಕಿ ಇರುವ ವೇತನ ಪಾವತಿಸಬೇಕು, ಸೂಕ್ತ ತನಿಖೆ ನಡೆಸಿ ಕೈಗಾರಿಕಾ ಕಾನೂನನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳ ಮೇಲೆ ಮೇಲೆ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಬಂಡವಾಳ ಹೂಡಿಕೆಗೆ ಭೂಮಿ ಕಳೆದುಕೊಂಡವರನ್ನು ಕೆಲಸದಲ್ಲಿ ಕಾಯಂ ಮಾಡಿಲ್ಲ. ಕಾರ್ಮಿಕರ ಸಮಸ್ಯೆ ಬಗ್ಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಕಿಂಚಿತೂ ಗಮನ ಹರಿಸಿಲ್ಲ ಎಂದು ಆರೋಪಿಸಿದ ಅವರು, ಸಂಸದ ಎಸ್. ಮುನಿಸ್ವಾಮಿ ಸರ್ಕಾರದ ಮೇಲೆ ಸಂಸದರು ಒತ್ತಡ ತಂದು ತನಿಖೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾರ್ಮಿಕರು ತಪ್ಪು ಮಾಡದಿದ್ದರೂ ಕ್ರಿಮಿನಲ್ ರೀತಿಯಲ್ಲಿ ಅವರನ್ನು ಸಮಾಜ ನೋಡುತ್ತಿದೆ. ಹಾಗಾಗಿ ಘಟನೆ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಜನತೆಯ ಮುಂದೆ ಸತ್ಯ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ವಿಸ್ಟ್ರಾನ್ ಕಂಪನಿಯ ಮಾಲೀಕರು ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯದಿಂದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ದಾರೆ.ಕಾರ್ಮಿಕರನ್ನು 12 ಗಂಟೆಗಳ ಕಾಲ ದುಡಿಸಿಕೊಂಡರು ಯಾಕೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ.ಗುತ್ತಿಗೆದಾರರು ಕಾರ್ಮಿಕರಿಗೆ ಸಕಾಲದಲ್ಲಿ ಸರಿಯಾದ ವೇತನ ನೀಡುತ್ತಿದ್ದಾರಾ ಎಂಬುದನ್ನು ಪರಿಶೀಲಿಸುವ ಕನಿಷ್ಠ ಕಾಳಜಿಯನ್ನೂ ತೋರಿಸದಿರುವುದೇ ಇಡೀ ಘಟನೆಗೆ ಕಾರಣ ಎಂದು ಆಪಾದಿಸಿದರು.

ವಿಸ್ಟ್ರಾನ್ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಹಾಗೂ ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡದ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಚಲೋ ನಡೆಸಿ ಪ್ರತಿಭಟನೆ ನಡೆಸಿದವು.

ವಿಜಯವಾಣಿ ಸುದ್ದಿಜಾಲ ಕೋಲಾರ