ನ್ಯೂಸ್

ವಿಷ್ಣು ಜನ್ಮದಿನದ ಅಂಗವಾಗಿ ವಿಶೇಷ ಗಾಯನ ಕಾರ್ಯಕ್ರಮ

ನಕ್ಷತ್ರ ಅಕಾಡೆಮಿ ಆಫ್‌ ಆರ್ಟ್ಸ್‌, ಮಲ್ಟಿ ಟ್ಯಾಲೆಂಟ್‌ ಕ್ರಿಯೇಟರ್ಸ್, ಮೋಹನ ಮಾಧುರ್ಯ ಕಲಾರಸಿಕರ ಸ್ನೇಹ ಬಳಗದಿಂದ  ಜಗನ್ಮೋಹನ ಅರಮನೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಉದ್ಘಾಟಿಸಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಟಿ. ಪ್ರಕಾಶ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ,. ಕೆ.ಆರ್. ಕ್ಷೇತ್ರ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ನಂದೀಶ್‌ ನಾಯಕ್‌ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ಮೋಹನ್‌ಮಾಧರ್ಯ ಮತ್ತು ತಂಡದವರು ಗಾಯನ ನಡೆಸಿಕೊಟ್ಟು, ಸಭಿಕರ ಮೆಚ್ಚುಗೆಗೆ ಪಾತ್ರರಾದರು.