ನ್ಯೂಸ್

ವಿಶ್ವಮಾನವ ಶಾಲೆಗೆ ಶೇ.94 ರಿಸಲ್ಟ್

ಚಿತ್ರದುರ್ಗ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸೀಬಾರ-ಗುತ್ತಿನಾಡು ವಿಶ್ವಮಾನವ ವಸತಿ ಪ್ರೌಢಶಾಲೆಗೆ ಶೇ.94.93 ಫಲಿ ತಾಂಶ ಬಂದಿದೆ. ಪರಿಕ್ಷೆಗೆ ಹಾಜರಾಗಿದ್ದ 217ವಿದ್ಯಾರ್ಥಿಗಳಲ್ಲಿ 206 ಮಂದಿ ಉತ್ತೀರ್ಣರಾಗಿದ್ದಾರೆ. 29 ಅತ್ಯುನ್ನತ ಶ್ರೇಣಿ, 132 ಪ್ರಥಮ, 42 ದ್ವಿತೀಯ ಸ್ಥಾನ ಪಡೆದಿದ್ದಾರೆ. ಶೇ.96.64 ಅಂಕಗಳೊಂದಿಗೆ ಬಿ.ರೇಖಾ ಶಾಲೆಗೆ ಪ್ರಥಮ, ಎ. ಕೀರ್ತಿ(ಶೇ.95.04)ದ್ವಿತೀಯ ಹಾಗೂ ಸಿ. ತಿಪ್ಪೇಸ್ವಾಮಿ(ಶೇ.94.56)ತೃತೀಯ ಸ್ಥಾನ ಪಡೆದಿದ್ದಾರೆ. ಎಂ. ಹಿಮಸಿಂಚನ(ಶೇ.94.56), ಆರ್. ಮುಸ್ಕಾನ್(ಶೇ.94.24), ಎನ್.ವಿ. ವಿನುತಾ (ಶೇ.94.08), ಡಿ. ಇಸ್ಮಾಯಿಲ್(ಶೇ.92.96)ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾ ರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪ್ರಮುಖರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.