ತರೀಕೆರೆ ಕಾಳಿಕಾದೇವಿ ದೇಗುಲದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಅಧ್ಯಕ್ಷ ಕನ್ನಡ ಸೋಮು ಮಾತನಾಡಿದರು. ಪರಮೇಶ್ವರಾಚಾರ್, ಉಮಾಶಂಕರ್, ಬಿ.ಜೆ.ಚೇತನ್‌ಕುಮಾರ್, ರಂಗನಾಥ್ ಇತರರಿದ್ದರು.  
ನ್ಯೂಸ್

ವಿಶ್ವಕರ್ಮ ಸಮಾಜ ಸಂಘಟಿತಗೊಳ್ಳಲಿ

ತರೀಕೆರೆ: ವಿಶ್ವಕರ್ಮ ಸಮಾಜವು ಸಂಘಟಿತಗೊಳ್ಳಬೇಕು ಎಂದು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಅಧ್ಯಕ್ಷ ಕನ್ನಡ ಸೋಮು ಹೇಳಿದರು.

ಪಟ್ಟಣದ ಕಾಳಿಕಾಂಬಾ ದೇಗುಲದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಸರ್ಕಾರ ಜನವರಿಯಲ್ಲಿ ಹಮ್ಮಿಕೊಳ್ಳಲಿರುವ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವದ ವೇದಿಕೆಯಲ್ಲೇ ವಿಶ್ವಕರ್ಮ ಜನಸೇವಾ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.

ಪಂಚ ವೃತ್ತಿಯಲ್ಲಿ ಅಮೋಘ ಸಾಧನೆ ಮಾಡಿದ ಮಹಿಳಾ ಮತ್ತು ಪುರುಷ ಸಾಧಕರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಕಾರ್ಯಕ್ರಮಕ್ಕೆ ಸಿಎಂ ದಿನಾಂಕ ನಿಗದಿಪಡಿಸಿದ ನಂತರ ಸ್ಥಳ ಪ್ರಕಟಿಸಲಾಗುವುದು. ವಿಶ್ವಕರ್ಮ ಸಮಾಜದ ವಿವಿಧ ಬೇಡಿಕೆಗಳನ್ನು ಸಿಎಂಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ವರಾಚಾರ್, ಜಿಲ್ಲಾಧ್ಯಕ್ಷ ಉಮಾಶಂಕರ್, ಗೌರವಾಧ್ಯಕ್ಷ ಬಿ.ಜೆ.ಚೇತನ್‌ಕುಮಾರ್, ತರೀಕೆರೆ ತಾಲೂಕು ಅಧ್ಯಕ್ಷ ರಂಗನಾಥ್, ಅಜ್ಜಂಪುರ ತಾಲೂಕು ಅಧ್ಯಕ್ಷ ಬಿ.ಕೃಷ್ಣಮೂರ್ತಿ, ಕಾಳಿಕಾದೇವಿ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥಾಚಾರ್, ಪ್ರಾಚಾರ್ಯೆ ಡಾ. ಎಸ್.ಬಿ.ಭಾಗ್ಯಲಕ್ಷ್ಮೀ ಮತ್ತಿತರರಿದ್ದರು.