ನ್ಯೂಸ್

ವಿಶ್ವಕರ್ಮ ಯೋಜನೆಗೆ ಅರ್ಜಿ ಆಹ್ವಾನ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೇಂದ್ರ ಸರ್ಕಾರವು ಕುಶಲಕರ್ಮಿಗಳ ಶ್ರೇಯೋಭಿವೃದ್ದಿಗಾಗಿ ಪ್ರಧಾನ ಮಂತ್ರಿಗಳ ವಿಶ್ವಕರ್ಮ ಯೋಜನೆಯನ್ನು ಹೊರತಂದಿದ್ದು, ಈ ಯೋಜನೆಯಡಿ ೧೮ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಶಲಕರ್ಮಿಗಳು ಆನ್ ಲೈನ್ ಪೋರ್ಟಲ್ ನಲ್ಲಿ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿ.ಎಸ್.ಸಿ) ನೊಂದಣಿ ಮಾಡಿಕೊಳ್ಳಬಹುದಾಗಿದೆ. ಸದರಿ ಯೋಜನೆಯಡಿ ನೊಂದಣಿಯಾಗುವ ಕುಶಲಕರ್ಮಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ನೊಂದಣಿಯಾದ ನಂತರ ಕುಶಲಕರ್ಮಿಗಳಿಗೆ ೦೫ ದಿನಗಳ ಸಾಮಾನ್ಯ ತರಬೇತಿ ಹಾಗೂ ೧೫ ದಿನಗಳ ವಿಶೇಷ ತರಭೇತಿಯನ್ನು ನೀಡಲಾಗುವುದು. ತರಬೇತಿಯ ಅವಧಿಯನ್ನು ಪ್ರತಿ ದಿನಕ್ಕೆ ರೂ.೫೦೦ ತರಬೇತಿ ಭತ್ಯೆ ನೀಡಲಾಗುವುದು.

ಕೌಶಲ್ಯದ ಮಟ್ಟವನ್ನು ಪರಿಶೀಲಿಸಿ ಕುಶಲಕರ್ಮಿಗಳಿಗೆ ಟೂಲ್ ಕಿಟ್ ಖರೀದಿಗಾಗಿ ೧೫೦೦೦ ರೂ.ಗಳು ನೀಡಲಾಗುವುದು. ಸಾಮಾನ್ಯ ತರಬೇತಿಯ ನಂತರ ಬ್ಯಾಂಕಿನಿAದ ರೂ.೧.೦೦ ಲಕ್ಷ ಹಾಗೂ ವಿಶೇಷ ತರಬೇತಿಯ ನಂತರ ಬ್ಯಾಂಕಿನಿAದ ರೂ.೨.೦೦ ಲಕ್ಷಗಳ ಸಾಲವನ್ನು ಪಡೆಯಬಹುದಾಗಿದ್ದು, ಶೇ.೫%ರ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹವಿರುವ ವೃತ್ತಿಗಳು : ಬಡಗಿ, ಕಮ್ಮಾರಿಕೆ, ಅಕ್ಕಸಾಲಿಗ, ಶಿಲ್ಪಿಗಳು, ಪಾದರಕ್ಷೆ ತಯಾರಕರು, ರಾಜಮೇಸ್ತಿç, ತೆಂಗಿನ ನಾರಿನ ಹಾಗೂ ಬಿದಿರು ಉತ್ಪನ್ನಗಳ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂಮಾಲೆ ತಯಾರಕರು, ದೋಬಿ, ದರ್ಜಿ, ಮೀನಿನ ಬಲೆ ತಯಾರಕರು, ದೋಣಿ ತಯಾರಕರು, ಕುಂಬಾರರು.

ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ವಿಸ್ತರಣಾಧಿಕಾರಿ, ದೂರವಾಣಿ ಸಂಖ್ಯೆ :೯೪೮೦೭೩೯೩೯೧ ಪ್ರಥಮ ದರ್ಜೆ ಸಹಾಯಕರು ದೂರವಾಣಿ ಸಂಖ್ಯೆ : ೭೯೭೫೪೬೨೭೦೪ ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.