ನ್ಯೂಸ್

ವಿಶ್ವ ಕರಾಟೆ ಚಾಂಪಿಯನ್‌ಶಿಪ್

  • ಚಿತ್ರದುರ್ಗ: ಬೆಂಗಳೂರು ಐಟಿಪಿಎಲ್ ಐಕ್ಯ ಪಬ್ಲಿಕ್ ಶಾಲೆ 6 ನೇ ತರಗತಿ ವಿದ್ಯಾರ್ಥಿನಿ ಐಸಿರಿ ಉಜ್ಬೇಕಿಸ್ತಾನದ ತಾಷ್ಕೆಂಟ್ ನಗರದಲ್ಲಿ ನಡೆದ 9 ನೇ ಅಂತಾರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಕರಾಟೆ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್- 2024 ರ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ನ.3 ರಿಂದ 6 ರವರೆಗೆ ನಡೆದ ಟೂರ್ನಿಯಲ್ಲಿ ರಷ್ಯಾ, ಚೀನಾ, ಜಪಾನ್, ಕೋರಿಯಾ ಮೊದಲಾದ 25 ದೇಶಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಚಿತ್ರದುರ್ಗ ಮೂಲದ ಶ್ರೀ ಹರ್ಷ-ಶ್ವೇತಾ ಅವರ ಪುತ್ರಿಯಾದ ಐಸಿರಿ ತನ್ನ ನಾಲ್ಕನೇ ವಯಸ್ಸಿನಿಂದ ಕೋಚ್ ಮಂಜುನಾಥ್ ಜೈನ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾಳೆ ಎಂದು ವಿಶ್ರಾಂತ ಪ್ರಾಧ್ಯಾಪಕ ಕೆ.ರಾಮರಾವ್ ತಿಳಿಸಿದ್ದಾರೆ.